ರೋಟರಾಕ್ಟ್ ಜಿಲ್ಲಾ ಮಂಡಳಿ ರೋಟರಿ ಜಿಲ್ಲೆ 3182 , ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ ಆಯೋಜನೆಯಲ್ಲಿ ರೋಟರಾಕ್ಟ್ ಒಳಾಂಗಣ ಕ್ರೀಡಾಕೂಟವು ದಿನಾಂಕ 5.10.2025 ನೇ ಭಾನುವಾರ ಕಾರ್ಕಳ ಶ್ರೀ ಭುವನೆಂದ್ರ ಕಾಲೇಜಿನ ಒಳಾಂಗಣ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3182 ವಲಯ 5 ರ ಸಹಾಯಕ ಗವರ್ನರ್ Rtn ವಿಘ್ನೇಶ್ ಶೆಣೈ ರವರು ಕ್ರೀಡೆಯು ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ದೂರ ಮಾಡುವುದರೊಂದಿಗೆ ರೋಟರಾಕ್ಟ್ ಸದಸ್ಯರ ಗೆಳೆತನ ಮತ್ತು ಬಾಂಧವ್ಯವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ವಲಯ ಐದರ ವಲಯ ಸೇನಾನಿ ಜಾನ್ ಡಿಸಿಲ್ವ, ವಲಯ 5ರ ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೋ, ರೊಟರಾಕ್ಟ್ ಜಿಲ್ಲಾ ಪ್ರತಿನಿಧಿ ನಿವಾಸ್ MR, ಕಾರ್ಕಳ ರೋಟರಿ ಸಂಸ್ಥೆಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ರೊಟರಾಕ್ಟ್ ಜಿಲ್ಲಾ ಕ್ರೀಡಾ ನಿರ್ದೇಶಕ ಕಾರ್ಕಳ ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷರಾದಂತ ರೋ. ಸಂದೇಶ್, ಸಂಸ್ಥೆಯ ಸಭಾಪತಿ ರೊಟೇರಿಯನ್ ಪ್ರಭಾ ನಿರಂಜನ್, ಸಂಸ್ಥೆಯ ಕ್ರೀಡಾ ನಿರ್ದೇಶಕರಾದ ರೋ. ಆದಿತ್ಯ, ರೋ. ನಿಯಮ್ ಶೆಟ್ಟಿ, ಕಾರ್ಯದರ್ಶಿ ಅನ್ವಯ್ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನಚಂದ್ರ ಇವರನ್ನು ಸನ್ಮಾನಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಲಯ ಐದರ ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಮತ್ತು ವಲಯ ಐದರ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಇವರು ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಸಂದೇಶ್ ಅವರು ಸ್ವಾಗತಿಸಿ ಕಾರ್ಯದರ್ಶಿ ಅನ್ವಯ್ ಧನ್ಯವಾದ ಸಮರ್ಪಿಸಿದರು ಮಾಜಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಆಚಾರ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.