ಯುವ ಸಾಧಕ ರಾಘವೇಂದ್ರ ನಾಯ್ಕ್ ಮತ್ತು ಯುವ ಸಾಧಕಿ ಕು. ನಂದಿನಿ ಜಿ. ಗೆ ಪ್ರಶಸ್ತಿ ಪ್ರಧಾನ
ಮಂಗಳೂರು ಮೇ. 23: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ 4ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-2025 ಯನ್ನು ಯುವ ಸಾಧಕ ರಾಘವೇಂದ್ರ ನಾಯ್ಕ್ ಮತ್ತು ಯುವ ಸಾಧಕಿಯಾದ ನಂದಿನಿ ಜಿ. ರವರು ರಾಜ್ಯಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ತಾ. 22.05.2025ರಂದು ನಗರದ ಆಫೀರ‍್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಸAಸ್ಥೆಯ ಅಧ್ಯಕ್ಷರಾದ ರೋ. ಗಣೇಶ್ ಕೊಡ್ಲಮೊಗರು ರವರು ಸ್ವಾಗತಿಸಿ, ನಗರದ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರೋ. ರಾಜೇಂದ್ರ ಕಲ್ಬಾವಿಯವರು ಅವರ ಪೋಷಕರಾದ ದಿ. ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ. ಸುಮಿತ್ರ ರಾವ್ ಸ್ಮರರ್ಣಾರ್ಥ ಜಿಲ್ಲೆಯ ಯುವ ಪ್ರತಿಭಾ ಮತ್ತು ಯುವ ಸಾಧಕರಾಗಿ ವಾರ್ಷಿಕ ಪ್ರಶಸ್ತಿಯನ್ನು ಪ್ರಾಯೋಜಿಸಲಾಗಿದ್ದು ಸಂಸ್ಥೆಯ ಯುವಜನ ಸೇವಾ ಯೋಜನೆಯ ಅಂಗವಾಗಿ ಯುವ ಸಾಧಕ ರಾಘವೇಂದ್ರ ನಾಯ್ಕ್ (ಜಾವಲಿನ್ (ಈ.ಟಿ) ದೂರ ಎಸೆತ) ಮತ್ತು ನಂದಿನಿ ಜಿ. (ದೂರ ಅಂತರದ ಓಟ) ಅವರ ಗಣನೀಯ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿ ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ನಗದು ರೂ. 10,000/- ಒಳಗೊಂಡಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡÀ ರೋಟರಿ ವಲಯ ಸಹಾಯಕ ಗವರ್ನರ್‌ರಾದ ರೋ. ಕೆ. ಎಮ್. ಹೆಗ್ಡೆ ಯವರು ಯುವ ಸಾಧಕರ ಕ್ರೀಡಾ ಉತ್ಸಾಹಕ್ಕೆ ಸಂಘಸAಸ್ಥೆಗಳು ಪ್ರೋತ್ಸಾಹ ನೀಡಿ ಯಶಸ್ಸು ಸಾಧಿಸಲು ಪ್ರೇರೇಪಿಸಬೇಕು ಎಂದು ನುಡಿದು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನದ ವಿಧಿವಿಧಾನವನ್ನು ನೆರವೇರಿಸಿ ಅವರ ವಿಶೇಷ ಪ್ರತಿಭೆ ಮತ್ತು ಅನುಪಮ ಸಾಧನೆಯನ್ನು ಪ್ರಶಂಶಿಸಿ ಉಜ್ವಲ ಭವಿಷ್ಯ ಹಾರೈಸಿದರು.
ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾದ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ರೋ. ಡಾ. ರಂಜನ್ ರಾವ್‌ರವರು ಮತ್ತು ಪ್ರಶಸ್ತಿಯ ಪ್ರಾಯೋಜಕರಾದ ರೋ. ರಾಜೇಂದ್ರ ಕಲ್ಬಾವಿಯವರು ಅಭಿನಂದನಾ ಭಾಷಣ ಮಾಡಿದರು. ರೋಟರಿ ಸಂಸ್ಥೆಯ ಯುವಜನ ಸೇವಾ ಯೋಜನೆಯ ನಿರ್ದೇಶಕರಾದ ರೋ. ಸುಮಿತ್ ರಾವ್ ರವರು ಪ್ರಶಸ್ತಿ ವಿಜೇತರ ಪರಿಚಯ, ಅಪ್ರತಿಮ ಪ್ರತಿಭೆ ಮತ್ತು ಅವರು ರಾಜ್ಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯ ಮಾಹಿತಿ ನೀಡಿದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪ್ರಶಸ್ತಿ ವಿಜೇತರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ರೋ. ಸುದೇಶ್ ವಂದಿಸಿದರು.