ಕಾರ್ಕಳ: ರೋಟರಿ ಆ್ಯನ್ಸ್ ವತಿಯಿಂದ ರೋಟರಿ ಬಾಲ ಭವನದಲ್ಲಿ ಬಳೆ ಇಡುವ ಕಾರ್ಯಕ್ರಮ ಹಾಗೂ ನವರಾತ್ರಿ ನವರಂಗೋತ್ಸವ ಸಡಗರದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಆ್ಯನ್ಸ್ ಸದಸ್ಯೆಯರು ಉತ್ಸಾಹದಿಂದ ಭಾಗವಹಿಸಿ, ಸಾಂಸ್ಕೃತಿಕ ಪ್ರತಿಭೆ ಮತ್ತು ಸೃಜನಶೀಲತೆಯ ಪ್ರದರ್ಶನ ನೀಡಿದರು.
ಮುಖ್ಯ ಅತಿಥಿಯಾಗಿ ಶೈಲಜಾ ಭಟ್ (ಮಾತಾಜಿ, ಯು.ಎಸ್. ನಾಯಕ್ ಹೈಸ್ಕೂಲ್, ಪಟ್ಲ) ಅವರು ಉಪಸ್ಥಿತರಿದ್ದು, ಮಹಿಳೆಯರ ಸಕ್ರಿಯ ಪಾತ್ರ ಮತ್ತು ಸಾಮಾಜಿಕ ಬಾಂಧವ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ Ann ವಿಜಯ್ ಶ್ರೀ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಡಾ. ಆಶಾ ಹೆಗಡೆ ಅವರು ಸಂಪೂರ್ಣ ಬಳೆ ಯ ಪ್ರಾಯೋಜಕತ್ವ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜ್ಯೋತಿ ಪದ್ಮನಾಭ ಅವರು ಸುಂದರವಾಗಿ ನಿರ್ವಹಿಸಿದರು. ಭಾಗವಹಿಸಿದ ಎಲ್ಲರಿಗೂ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ವಿಜೇತರು:
ಪ್ರಭಾ ನಿರಂಜನ್
ಗಾಯತ್ರಿ ವಿಜೇಂದ್ರ ಕುಮಾರ್
ರೇಖಾ ಉಪಾಧ್ಯಾಯ
ಈ ಬಹುಮಾನಗಳ ಪ್ರಾಯೋಜಕರು ಗೌರವ್ ಆಚಾರ್ಯ, ಸ್ವರ್ಣ ಪ್ರಕಾಶ್ ಜುವೆಲರ್ಸ್, ಜೋಡು ರಸ್ತೆ, ಕಾರ್ಕಳ. ವಿಶೇಷ ಬಹುಮಾನಕ್ಕೆ ದೀಪಾ ಅರುಣ್ ಅವರು ಪ್ರಾಯೋಜಕರಾಗಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ರೋಟರಿ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಕೋಶಾಧಿಕಾರಿ ಹರ್ಷಿಣಿ ವಿಜಯರಾಜ್ ಶೆಟ್ಟಿ ಹಾಗು ಎಲ್ಲಾ ರೋಟರಿ ಸದಸ್ಯರು, ಆ್ಯನ್ಸ್ ಚೇರ್ಮನ್ ವೃಂದಾ ಶೆಟ್ಟಿ, ಆ್ಯನ್ಸ್ ಅಧ್ಯಕ್ಷೆ ಜಯಂತಿ ನಾಯಕ್, ಮತ್ತು ಆ್ಯನ್ಸ್ ಕಾರ್ಯದರ್ಶಿ ಆಶಾ ಸೋನಿಯಾ ಡಿ’ಮೆಲ್ಲೋ, ಆನ್ಸ್ ಕೋಶಾಧಿಕಾರಿ ಸಹನಾ ಭಟ್ ಮತ್ತು ಆನ್ಸ್ ನ ಎಲ್ಲಾ ಸದಸ್ಯೆಯರು ಮಹತ್ತರವಾದ ಸಹಕಾರ ನೀಡಿದರು.

