ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ, ರೋಟ್ರಾಕ್ಟ್ ಕ್ಲಬ್ ಕಾರ್ಕಳ ಮತ್ತು ಎಂ.ಪಿ.ಎಂ., ಆನ್ಸ್ ಕ್ಲಬ್ ಕಾರ್ಕಳ, ಆರ್.ಸಿ.ಸಿ. ಕಲಂಬಾಡಿ ಪದವು ಇವರ ಸಂಯುಕ್ತ ಆಶ್ರಯದಲ್ಲಿ ಮುರತಂಗಡಿಯ ಗದ್ದೆಯಲ್ಲಿ ‘ಕೆಸರ್ದ ಗೊಬ್ಬು ಎಸಲ್ 2’ ನಡೆಯಿತು. ಇದರ ಉದ್ಘಾಟಿಸಿ ಮಾತನಾಡಿದ ರೋಟರಿಯ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಒಂದು ದಿನವಾದರೂ ಗದ್ದೆಯಲ್ಲಿದ್ದು ರೈತನ ಬದುಕನ್ನು ಅನುಭವಿಸಬೇಕು ಎಂದರು.
ರೋಟರಿ ಕಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ಆಲ್ವಿನ್ ನ್ಯಾರಿ ಪಿಂಟೋ, ಜೋನೆಲ್ ಲೆಫ್ಟಿಂನೆಂಟ್ ಜಾನ್ ಆರ್ ಡಿಸಿಲ್ವ, ರೋಟರಿ ಕಾರ್ಯದರ್ಶಿ ಚೇತನ್ ನಾಯಕ್, ರೊಟ್ರಾಕ್ಟ್ ಅಧ್ಯಕ್ಷ ಸಂದೇಶ್, ಕಾರ್ಯದರ್ಶಿ ಅನ್ವಯ್, ಸಾಣೂರು ಗ್ರಾಮ ಪಂಚಾಯ್ ಅಧ್ಯಕ್ಷ ಯುವರಾಜ್ ಜೈನ್, ಹಾಗೂ ರೋಟರಿ ಸಹ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸನ್ಮಾನ
ಇದೇ ಸಂದರ್ಭದಲ್ಲಿ ಸಾಣೂರಿನ ಹಿರಿಯ ಕೃಷಿಕ ಸಂಜೀವ ಶೆಟ್ಟಿಗಾರ್, ಕಂಬಳದ ಓಟಗಾರ ಇರ್ವತ್ತೂರು ಕೊಳಕೆ ಆನಂದ, ಕೋಣಗಳ ಮಾಲೀಕ ಪ್ರಸಾದ್ ಶೆಟ್ಟಿ ಇರ್ವತ್ತೂರು, ಗದ್ದೆಯ ಮಾಲೀಕರಾದ ಸಮದ್ ಖಾನ್ ಅವರನ್ನು ಸನ್ಮಾನಿಸಲಾಯಿತು.
ಕೂಟದಲ್ಲಿ ಕಂಬಳದ ಕೋಣಗಳ ವಿಶೇಷ ಆಕರ್ಷಣೆ ಇತ್ತು. ಬಳಿಕ ಕೆಸರಿನ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆದು ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ರೋಟ್ರಾಕ್ಟರ್ ರಕ್ಷಾ ಪ್ರಾರ್ಥಿಸಿದರು. ಎಲ್ಲರನ್ನು ಸ್ವಾಗತಿಸಿದ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ಕುಮಾರ್ ವಂದಿಸಿದರು.

