ರೋಟರಿ ಕ್ಲಬ್ ಕಾರ್ಕಳ ಪ್ರಾಯೋಜಿತ ಕಾಳಿಕಾಂಬ ಮತ್ತು ಕಲ್ಲಂಬಾಡಿ ಪದವು ರೋಟರಿ ಸಮುದಾಯ ದಳಗಳ ಪದಗ್ರಹಣ ಸಮಾರಂಭವು ರೋಟರಿ ಬಾಲಭವನ ಕಾರ್ಕಳದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ಪದಗ್ರಹಣ ಸಮಾರಂಭವನ್ನು ನೆರವೇರಿಸಿ ಕೊಟ್ಟು ಮಾತನಾಡುತ್ತಾ ಸಮುದಾಯದಳಗಳು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ.ತಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಕ್ಲಬ್ಬಿನ ವತಿಯಿಂದ ಸದಾ ಸಹಕಾರ ಇದೆ ಎಂದರು. ಕಲ್ಲಂಬಾಡಿ ಪದವು ಮತ್ತು ಕಾಳಿಕಾಂಬ ಸಮುದಾಯದಳಗಳ ಹಿಂದಿನ ವರ್ಷದ ವರದಿಯನ್ನು ಅನುಕ್ರಮವಾಗಿ ಜಗದೀಶ್ ನಾಯಕ್ ಮತ್ತು ರಮಾದೇವಿ ಆಚಾರ್ಯ ರವರು ಸಭೆಗೆ ಮಂಡಿಸಿದರು
2025 _ 26 ನೇ ಸಾಲಿನ ಅಧ್ಯಕ್ಷರಾಗಿ ಕಾಳಿಕಾಂಬ ಆರ್‌ಸಿಸಿ.ಯ ಆಶಾ ಜೆ ಆಚಾರ್ಯ, ಕಾರ್ಯದರ್ಶಿಯಾಗಿ ಗೀತಾ ಚಂದ್ರ ಮತ್ತು ಕಲ್ಲಂಬಾಡಿ ಪದವು ಆರ್‌ಸಿಸಿಯ ಅಧ್ಯಕ್ಷರಾಗಿ ಸುರೇಶ ಆಚಾರ್ಯ, ಕಾರ್ಯದರ್ಶಿಯಾಗಿ ಜಗದೀಶ್ ನಾಯಕ್ ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್.ಸಿ.ಸಿ.ಯ ಝೋನಲ್ ಕೋರ್ಡಿನೇಟರ್ ರೋಟೇರಿಯನ್ ಜಯಕೃಷ್ಣ ಆಳ್ವ ರವರು ರೋಟರಿ ಸಮುದಾಯದಳಗಳು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿ ನೂತನ ಅಧ್ಯಕ್ಷ ಹಾಗೂ ತಂಡಕ್ಕೆ ಶುಭ ಕೋರಿದರು.
ಆರ್ ಸಿ ಸಿ ಚೇರ್ಮನ್ ಶೇಖರ್ ಹೆಚ್. ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ರೋಟರಿ ಕ್ಲಬ್ಬಿನ ಸದಸ್ಯ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.