ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ನರಿಕೊಂಬು ದೊಂಪದಬಲಿ ಅಂಗನವಾಡಿ ಕೇದ್ರ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ

0
30

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ದೊಂಪದಬಲಿ ಅಂಗನವಾಡಿ ಕೇಂದ್ರದ ಅಂಗಳಕ್ಕೆ ರೋಟರಿ ಕ್ಲಬ್ ಮೊಡಂಕಾಪು ವತಿಯಿಂದ ಉಚಿತವಾಗಿ ಇಂಟರ್ ಲಾಕ್ ಅವಳಡಿಸಿದ್ದು ಅಕ್ಟೋಬರ್ 31 ಶುಕ್ರವಾರ ರೋಟರಿ ಕ್ಲಬ್ ಅಧ್ಯಕ್ಷರಾದ ರೋ.ಪ್ರಿಮಾ ಫೆರ್ನಾಂಡಿಸ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷರಾದ ರೋ.ಎಲಿಯಾಸ್ ಸ್ಯಾಂಕ್ಟಿಸ್, ರೋಟರಿ ಕಾರ್ಯದರ್ಶಿ ರೋ.ಪ್ರಸನ್ನ ಕುಮಾರ್, ಸದಸ್ಯರಾದ ರೋ.ಮಹಮದ್ ಬ್ಯಾರಿ ಬೊಳ್ಳಾಯಿ, ರೋ ಇಬ್ರಾಹಿಂ ಮೊಯಿದಿನಬ್ಬ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರೇಮ್ ನಾಥ್ ಶೆಟ್ಟಿ, ವಿಜಯಲಕ್ಷ್ಮಿ ಯುವಕ ಸಂಘದ ಅಧ್ಯಕ್ಷ ಹರೀಶ್,ಅಂಗನವಾಡಿ ಶಿಕ್ಷಕಿ ಜಿನ್ನಮ್ಮ ಟೀಚರ್, ಅಂಗನವಾಡಿ ಸಹಾಯಕಿ ಹಾಗೂ ಮಕ್ಕಳ ಪೋಷಕರು  ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here