ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ರೋಟರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಡಿಸೆಂಬರ್ 12 ರಂದು ಅಮರಾವತಿ ಆಡಿಟೋರಿಯಂ ನಲ್ಲಿ ನಡೆಯಿತು. ಮಂಗಳೂರು ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ಕುಮಾರ ಚಂದ್ರ ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿ ಡಿ ಪಿ ಐ ಶಶಿಧರ್ ಅವರು ಶಿಕ್ಷಕರುಗಳಾದ ಮೋಹನ್, ಜಯಪ್ರಕಾಶ್ ಅಮೀನ್, ಮಹೇಶ್ ಹುಲಿಕಲ್, ಹಾಗೂ ಶಕುಂತಲಾ ಹಾಗೂ ವಿದ್ಯಾರ್ಥಿಗಳು ರಚಿಸಿದ ಆರ್ಟ್ ಗ್ಯಾಲರಿಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಉತ್ತಮ ಕಾರ್ಯವನ್ನು ಮೆಚ್ಚಿಕೊಂಡರು.
ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ ಎಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಕೆ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ರೊಟೇರಿಯನ್ ಗಳಾದ ಎಂ ಪವನ್ ಪೈ, ಪ್ರವೀಣ್ ಚಂದ್ರ, ಪಿಕೆ ತೋಮಸ್, ನಾಗರಾಜ್ ಬಿ ಎಂ, ಪ್ರಭಾಕರ್, ಸಹನಾ, ಶ್ವೇತಾ ಜೈನ್, ಶೋಭಾ ಸಿಕ್ವೇರಾ, ವೀಣಾ ಹಾಜರಿದ್ದರು. ಶಿಕ್ಷಕರಗಳಾದ ಸರಿತಾ, ವಿನಯಾ, ವಿದ್ಯಾಶ್ರೀ ಪರಿಚಯ ಗೈದರು. ಪ್ರಣಾಮಿ, ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಜೆ ಡಬ್ಲ್ಯೂ ಪಿಂಟೋ ವಂದಿಸಿದರು.

