ರೋಟರಿ ಆಂಗ್ಲಮಾಧ್ಯಮ ಶಾಲೆ ಮೂಡುಬಿದಿರೆ : ಕಿಂಡರ್ಗಾರ್ಟನ್ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ

0
13

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಯು ಕೆ ಜಿ ವಿದ್ಯಾರ್ಥಿಗಳ ಪದವಿಧಾರಣ ಕಾರ್ಯಕ್ರಮವು ಫೆಬ್ರವರಿ 18 ರಂದು ಬೆಳಿಗ್ಗೆ 10.30 ಕ್ಕೆ ರೋಟರಿಆಂಗ್ಲ ಮಾಧ್ಯಮ ಶಾಲೆಯ ಸಮ್ಮಿಲನ ಸಭಾಂಗಣದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಯುಕೆಜಿ ಯ ಎಲ್ಲಾ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ಮೂಲಕ ಬಂದಂತ ಅತಿಥಿಗಳ ಜೊತೆಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಸಂಸ್ಥೆಗಳ ಅಧ್ಯಕ್ಷರಾದ ನಾರಾಯಣ್ ಪಿ.ಎಂ.,
ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ , ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ , ಪುಟಾಣಿಗಳಿಗೆ ಕಿಂಡರ್ಗಾರ್ಟನ್ ಪದವಿಧಾರಣೆ ಮಾಡಿ, ಎಲ್ಲರಿಗೂ ಶುಭ ಹಾರೈಸಿದರು..
ಕಿರಿಯ ವಿದ್ಯಾರ್ಥಿಗಳಾದ ಕವನ ಅಮಿತ್ ಮತ್ತು ಅಭ್ಯಂತ್ ಚಿತ್ರಾಕ್ಷ್ ಸಾಲ್ಯಾನ್ ಶುಭ ಹಾರೈಸಿದರು ಹಾಗೂ ಕೆ ವಂಶಿಕಾ ಕಾಮತ್ , ಅನ್ವಿತ ಕೂಳೂರು ಮತ್ತು ಜೋಹಾನ್ ಸೆರಾವೋ ತಮ್ಮ ಕಿಂಡರ್ಗಾರ್ಟನ್ ಜರ್ನಿಯ ಅನುಭವ ಹಂಚಿಕೊಂಡರು..
ಪುಟಾಣಿಗಳ ಪೋಷಕರು ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಪುಟಾಣಿಗಳಿಂದ ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಮುಖ್ಯೋಪಾಧ್ಯಾಯಿನಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.. ವಿದ್ಯಾರ್ಥಿಗಳಾದ ಎಲ್ನೋರಾ ಹೆಲೆನ್ ಪಿಂಟೋ ಹಾಗೂ ವೆಲನಿ ಕಾರ್ಡೋಜ ಕಾರ್ಯಕ್ರಮ ನಿರೂಪಿಸಿದರು
ಶಿಕ್ಷಕಿ ಗಾಯತ್ರಿ ವಂದಿಸಿದರು

LEAVE A REPLY

Please enter your comment!
Please enter your name here