ಬಾಲಕೃಷ್ಣ ಪೈ ಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ
ಮಂಗಳೂರು ಫೆ. 24: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಗರದ ಆಫಿಸರ್ಸ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷೆಯಾದ ರೋ, ಸಜ್ಜಾ ಭಾಸ್ಕರ್‌ರವರ : 23.02.2026 ರಂದು ಜರಗಿತು.
ರೋ ಸಜ್ಜಾ ಭಾಸ್ಕರ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಮಾಸಾಚರಣೆ ಹಾಗೂ ಯೋಜನೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಮಾಜಕ್ಕೆ ಉತ್ತಮ. ನಿಸ್ವಾರ್ಥ, ಮತ್ತು ಪ್ರಾಮಾಣಿಕ ಸೇವಾ ಮನೋಭಾವದಿಂದ ಶ್ರೇಷ್ಠ ಕೊಡುಗೆ ನೀಡಿದವರನ್ನು ಗುರುತಿಸಿ, ಆಯ್ಕೆ ಮಾಡಿ ರೋಟರಿ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಧಕರಾದ ಕಸ್ತೂರಿ ಬಾಲಕೃಷ್ಣ ಪೈ ಅವರು ಕ್ರಿಕೇಟ್ ಆಟಗಾರನಾಗಿ, ಯುವಕರಿಗೆ ಕ್ರಿಕೆಟ್ ತರಬೇತುದಾರರಾಗಿ ಕ್ರಿಕೇಟ್ ಪಂದ್ಯಾಟದಲ್ಲಿ ತೀರ್ಪುಗಾರರಾಗಿ ಹಾಗೂ ದ.ಕ. ಜಿಲ್ಲೆಯ ಕ್ರಿಕೇಟ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಸುಮಾರು 50 ವರ್ಷಗಳ ಸುಧೀರ್ಘ ಅವಧಿಯಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಮತ್ತು ವಿವಿಧ ಸ್ಪರ್ಧಾ ಪಂದ್ಯಾಟಗಳನ್ನು ಆಯೋಜಿಸಿ ಯಶಸ್ಸು ಸಾಧಿಸಿದನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ, ಪ್ರತಿಕರಿಸಿದ ಪೈಯವರು ಸಾಧಕರನ್ನು ಗುರುತಿಸಿ ಸನ್ಮಾನಿಸುವ ರೋಟರಿ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಲಯ ಸಹಾಯಕ ಗವರ್ನ‌್ರರಾದ ರೋ. ಡಾ. ರವಿಶಂಕರ್ ರಾವ್‌ರವರು ಫೆ. 23 1905 ರಲ್ಲಿ ಶಿಕಾಗೋ (ಅಮೆರಿಕಾ) ನಗರದಲ್ಲಿ ಸ್ಥಾಪನೆಗೊಂಡು ಅದರ ಇತಿಹಾಸ, ಬೆಳವಣಿಗೆ, ಕೊಡುಗೆ ಮತ್ತು ವಿವಿಧ ಸಮಾಜ ಸೇವಾ ಸಾಧನೆಗಳ ಮಾಹಿತಿ ನೀಡಿದರು. ಇದೊಂದು ರೋಟರಿ ಸದಸ್ಯರಿಗೆ ಸಂಭ್ರಮ ಮತ್ತು ಚಿರಸ್ಥರನೀಯ ದಿನಾಚರಣೆ ಎಂದು ನುಡಿದು, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಸ್ಥಾಪನಾ ಅಧ್ಯಕ್ಷರಾದ ರೋ, ಡಾ. ರಂಜನ್‌ರವರು ತಮ್ಮ ಅಭಿನಂದನಾ ಭಾಷಣದಲ್ಲಿ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿ ಕ್ರಿಕೇಟ್ ಕ್ಷೇತ್ರಕ್ಕೆ ಪೈಯವರ ಕೊಡುಗೆ, ಅನುಪಮ ಸೇವೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ಅಭಿನಂದಿಸಿದರು.
ವೇದಿಕೆಯಲ್ಲಿ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ನಿತಿನ್ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಜೀರ್ ಪದ್ಮನಾಭ ನಾಯ್ಕ ರವರು ವರದಿ ಮಂಡಿಸಿ ಬಳಿಕ ವಂದಿಸಿದರು.
ವರದಿ : ಎಂ.ವಿ. ಮಲ್ಯ

