ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ 100ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ “ಹಿಂದೂ ಸಂಗಮ” ದ ನೆಲ್ಲಿಕಾರು ಮಂಡಲದ ಆಮಂತ್ರಣ ಪತ್ರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಲಾಯಿತು.
ಫೆಬ್ರವರಿ 1 ಆದಿತ್ಯವಾರದಂದು ಮಧ್ಯಾಹ್ನ 3 ಗಂಟೆಗೆ ಕೆಲ್ಲಪುತ್ತಿಗೆ ಮಹಾಮಾಯಿ ದೇವಸ್ಥಾನದ ವಠಾರದಿಂದ ವೈಭವದ ಆಕರ್ಷಕ ವಿವಿಧ ವಿನೋದವಳಿಗಳಿಂದ ಮೆರವಣಿಗೆಯೊಂದಿಗೆ ಶೋಭಾ ಯಾತ್ರೆ ಹೊರಟು ವೀರ ಮಾರುತಿ ಕ್ರೀಡಾಂಗಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ .
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವಿಠಲ ಸೋಮನಾಥೇಶ್ವರ ದೇವಸ್ಥಾನ ಆಡಳಿತ ಮುಖ್ಯಸ್ಥರರಾದ ವಿಮಲ್ ಕುಮಾರ್ ಶೆಟ್ಟಿ, ಹಿಂದೂ ಸಂಗಮ ಆಯೋಜನ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ ಹಿಂದೂ ಜಾಗರಣ ವೇದಿಕೆ ಸಮಿತ್ ರಾಜ್ ದರೆಗುಡ್ಡೆ, ಗಣೇಶ್ ನೆಲ್ಲಿಕಾರು ಅಶೋಕ್ ಶೆಟ್ಟಿ ಬೇಲೂಟ್ಟು ಮುನಿರಾಜ್ ಹೆಜ್ಜೆ ಜಯಂತಿ ರಮೇಶ್ ಪೂಜಾರಿ ಚಿತ್ತರಂಜನ್ ಕೋಟ್ಯಾನ್ ಸುನಿಲ್ ಪೂಜಾರಿ ಅನಿಲ್ ಶೆಟ್ಟಿ ಸನ್ಮತ್ ಜೈನ್ ಮಹಿಳಾ ಪ್ರಮುಖರಾದ ಸುಜಾತ ಆಶಾ ನಳಿನಿ ಹರೀಶ್ ಶಶಿಕಲಾ ಇನ್ನಿತರ ಉಪಸ್ಥಿತರಿದ್ದರು.

