ಮೂಡುಬಿದಿರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪ್ರಯುಕ್ತ ಮೂಡುಬಿದಿರೆ ತಾಲೂಕು ಇದರ ವಿಜಯ ದಶಮಿ ಪಥ ಸಂಚಲನ ಭಾನುವಾರ ಬೆಳಿಗ್ಗೆ ನಡೆಯಿತು.

ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ದ ಆವರಣದಿಂದ 600 ಮಂದಿ ಗಣವೇಷಧಾರಿಗಳು ಮೂಡುಬಿದಿರೆ ಪೇಟೆಯ ಮೂಲಕ ಸ್ವರಾಜ್ಯ ಮೈದಾನದವರೆಗೆ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದರು.

