ಮಡಿಕೇರಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಕರ್ತರ ಮೇಲೆ ರಾಡ್‌ನಿಂದ (Rod) ಹಲ್ಲೆಗೈದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಭಜರಂಗ್ ಹಾಡು ಹಾಕಿದ್ದಕ್ಕೆ ಚಾಲಕ ಹಾಗೂ ಕಾರ್ಯಕರ್ತರ ಮೇಲೆ ಈ ಘಟನೆ ಸಂಭವಿಸಿದೆ.
ಹಲ್ಲೆ ಮಾಡಿ ಆರೋಪಿ ಮುಸ್ಲಿಂ ಸ್ಥಳದಿಂದ ಎಸ್ಕೇಪ್ ಆಗಿದ್ದು, ಘಟನೆಯಿಂದಾಗಿ ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆ.
ಹಾಡು ಹಾಕಿದ್ದಕ್ಕೆ ವಾಹನ ತಡೆದು ಆರೋಪಿ ಗಲಾಟೆ ನಡೆಸಿದ್ದು, ಪರಿಣಾಮ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಘಟನೆಯಿಂದ ಮಡಿಕೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದು, ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

