ಬ್ರಹ್ಮಾವರ : ಸ್ವ ಉದೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರ್ಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ, ಇಂದು ಅನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗು ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ರ್ತ , ತರಬೇತಿ ಕಿಟ್‌ನೊಂದಿಗೆ ತರಬೇತಿ ನೀಡಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗೆ ಅವಕಾಶವಿರುವುದು.
ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ತರಬೇತಿಗಳು:
ಫಾಸ್ಟ್ ಫುಡ್ ತಯಾರಿ ತರಬೇತಿ ,ಕಂಪ್ಯೂಟರ್ ಡಿಟಿಪಿ ತರಬೇತಿ, ಅಣಬೆ ಬೇಸಾಯ ತರಬೇತಿ, ಬ್ಯೂಟಿ ಪರ‍್ಲರ್ ಮ್ಯಾನೇಜ್ಮೆಂಟ್ ತರಬೇತಿ, ಹಪ್ಪಳ,ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿ, ಕೋಳಿ ಸಾಕಾಣಿಕೆ ತರಬೇತಿ , ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಯನ್ನು ಆಯೋಜಿಸಲಾಗುವುದು.
ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 50 ವರ್ಷ ಒಳಗಿರುವವರು, ಬಿ.ಪಿ.ಎಲ್. ಕುಟುಂಬದ ಸದಸ್ಯರಾಗಿರಬೇಕು, ಕನ್ನಡ ಓದಲು ಬರೆಯಲು ಬರುವ, ಮುಂದೆ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು, ನಿಮ್ಮ ಹೆಸರು, ವಿಳಾಸ, ನಿಮ್ಮ ವಾಟ್ಸಪ್ ಮೊಬೈಲ್ ನಂಬರ್, ನೀವು ಪಡೆಯಲು ಇಚ್ಚಿಸುವ ತರಬೇತಿ ಯಾವುದು ಎಂದು ಬರೆದು ಇದರ ಜೊತೆಗೆ ನಿಮ್ಮ ರೇಷನ್ ಕಾರ್ಡ್, ಆದಾರ್ ಕಾರ್ಡ್ ಇರಿಸಿ. ತಕ್ಷಣ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52 ನೇ ಹೇರೂರು, ಬ್ರಹ್ಮಾವರ-575213, ಉಡುಪಿ ಜಿಲ್ಲೆ. ಅಧವಾ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಬಹುದು. ದೂರವಾಣಿ ಸಂಖ್ಯೆ : 9844086383, 7022560492 ಅಧವಾ ಈ ಲಿಂಕ್ ನಾ ಮೂಲಕ ಅರ್ಜಿ ಸಲ್ಲಿಸಬಹುದು. https://forms.gle/qovW8cAn6MMahRwGA
