ಕರಂಬಳ್ಳಿಯಲ್ಲಿ ಋಕ್ ಸಂಹಿತಾ ಯಾಗ, ಭಾಗವತ ಸಪ್ತಾಹಕ್ಕೆ ಭವ್ಯ ಚಾಲನೆ

0
4

ಶ್ರೀ ವೆಂಕಟರಮಣ ದೇವರ ಕೃಪಾಶೀರ್ವಾದದಿಂದ ಕರಂಬಳ್ಳಿ, ಉಡುಪಿ ಕ್ಷೇತ್ರದಲ್ಲಿ ನಡೆಯಲಿರುವ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಹೋತ್ಸವಕ್ಕೆ ಆಗಮಿಸಿದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರನ್ನು ಮೆರವಣಿಗೆಯ ಮೂಲಕ ಭಜನೆ ತಂಡಗಳು ವಾದ್ಯ ಚೆಂಡೆ ಕೊಂಬುವಾದನ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಶ್ರೀ ಪಂಚ ಜುಮಾದಿ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಯು ಬಿ ಅಜಿತ್ ಕುಮಾರ್ ಅವರು ಮೆರವಣಿಗೆಗೆ ಚಾಲನೆ ನೀಡಿದರು ಹಾಗೂ ವೆಂಕಟರಮಣ ದೇವಸ್ಥಾನ ಆಡಳಿತ ಮುಖ್ಯಸ್ಥರಾದ ರಘುಪತಿ ಭಟ್ ಹಾಗೂ ಆಡಳಿತ ಮಂಡಳಿ ಅರ್ಚಕ ವೃಂದ ಗ್ರಾಮಸ್ಥರು ಸಂಘ ಸಂಸ್ಥೆಯ ಮುಖಂಡರು ಹಾಗೂ ಪಂಚ ಜುಮಾದಿ ದೈವಸ್ಥಾನದ
ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಶೆಟ್ಟಿ ಬಾಲೆ ಗುರಿಕಾರರು ಮುಕ್ಕಾಲ್ದಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶುಭಾರಂಭದ ಸುವರ್ಣ ಕ್ಷಣ 03-04-2026 ರಂದು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಯಜ್ಞ ಸಂಹಿತಾ ಯಾಗ ಮತ್ತು ಶ್ರೀಮದ್ಭಾಗವತ ಸಪ್ತಾಹಕ್ಕೆ ಭವ್ಯ ಚಾಲನೆ ಉದ್ಘಾಟನೆ
ಪೂಜ್ಯ ಶ್ರೀ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದಂಗಳವರು ಶ್ರೀ ಪಲಿಮಾರು ಮಠ, ಉಡುಪಿ ಅವರಿಂದ ನೆರವೇರಿತು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here