ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ: ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಬಡಾವಣೆ ಅಭಿವೃದ್ಧಿಗೆ ಹೊಸ ನಿಯಮ ಜಾರಿಗೆ

0
78

ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಯೋಜನಾ ಪ್ರದೇಶ ಹೊರತುಪಡಿಸಿದ ಜಾಗಗಳಲ್ಲಿ ಬಡಾವಣೆ ಅಭಿವೃದ್ಧಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಹೊಸ ನಿಯಮಗಳನ್ನು ಸುತ್ತೋಲೆ ಮೂಲಕ ರೂಪಿಸಲಾಗಿದೆ.

ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಇರುವ ಮತ್ತು ಭೂ ಪರಿವರ್ತನೆಗೆ ಒಳಗಾದ ಗ್ರಾಮ ಪಂಚಾಯತ್‌ನ ಜಮೀನುಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪೂರ್ವಾನುಮೋದನೆ ಪಡೆದ ಈ ಬಡಾವಣೆಗಳಲ್ಲಿನ ನಿವೇಶನಗಳಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ಖಾತೆ ಮಾಡಿಕೊಡಲಾಗುವುದು. ಆದರೆ, ಭೂಪರಿವರ್ತನೆ ಇಲ್ಲದೆ ಅಭಿವೃದ್ಧಿ ಪಡಿಸಲಾದ ಬಡಾವಣೆಗಳಿಗೆ ಇದು ಅನ್ವಯವಾಗುವುದಿಲ್ಲ. ಬಡಾವಣೆಯನ್ನು ಅಭಿವೃದ್ಧಿಪಡಿಸುವುದಕ್ಕೂ ಮೊದಲು ಅದಕ್ಕೆ ಸಂಬಂಧಿತ, ಪರಿವರ್ತಿತ ಜಮೀನಿನ ಮಾಲೀಕ ಬಡಾವಣೆಯ ವಿನ್ಯಾಸವನ್ನು ರಚಿಸಬೇಕು ಎಂಬ ಷರತ್ತನ್ನು ಹಾಕಲಾಗಿದೆ. ಅದೇ ರೀತಿ, ಬಡಾವಣೆಯಲ್ಲಿ ಇರಲಿರುವ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ, ಒಳಚರಂಡಿ, ನೀರಿನ ಕೊಳವೆ ಮಾರ್ಗ, ತ್ಯಾಜ್ಯ ನೀರು ಸಂಸ್ಕರಣ ಘಟಕ, ವಿದ್ಯುತ್ ಜಾಲಗಳಿಗೆ ಸಂಬಂಧಿತ ಇಲಾಖೆ ಅಥವಾ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ. ಈ ಎಲ್ಲ ದಾಖಲೆಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ, ಬಡಾವಣೆ ಅಭಿವೃದ್ಧಿ ಪಡಿಸಲು ಅನುಮತಿ ಪಡೆಯಬೇಕು. ಹೀಗೆ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿನ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ- ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳನ್ನು ಹಕ್ಕು ಪರಿತ್ಯಾಜನಾ ಪತ್ರದ ಮೂಲಕ ಗ್ರಾಮ ಪಂಚಾಯಿತಿಗೆ ಬಿಟ್ಟು ಕೊಡಬೇಕು.

ಸುತ್ತೋಲೆಯ ಪ್ರಮುಖ ಅಂಶಗಳು ಹೀಗಿವೆ.

*ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿತ ಇಲಾಖೆ/ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆದ ನಂತರವಷ್ಟೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಅವಕಾಶ

*ಗ್ರಾಮೀಣಾಭಿವೃದ್ಧಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಎಸ್ಕಾಂಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ

*ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವೇಳೆ ಸಂಬಂಧಿತ ಇಲಾಖೆ/ಪ್ರಾಧಿಕಾರ/ವಿಭಾಗಗಳಿಗೆ ಒಟ್ಟು ವೆಚ್ಚದ ಶೇಕಡಾ 5 ರಿಂದ ಶೇಕಡಾ 10 ರವರೆಗೆ ಮೇಲ್ವಿಚಾರಣಾ ಶುಲ್ಕ ಪಾವತಿಸಬೇಕು

* ಬಡಾವಣೆಗಳಲ್ಲಿನ ರಸ್ತೆ, ಉದ್ಯಾನ, ಸಾರ್ವಜನಿಕ ಬಳಕೆ ಪ್ರದೇಶ, ನಾಗರಿಕ ಬಳಕೆ ನಿವೇಶನಗಳನ್ನು ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡುವುದು ಕಡ್ಡಾಯ

LEAVE A REPLY

Please enter your comment!
Please enter your name here