ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ”

0
154

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 17ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಪ್ರಯುಕ್ತ ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಜಪ್ಪಿನಮೊಗರು, ಬಜಾಲ್, ಕಂಕನಾಡಿ ಬಿ’, ಅಳಪೆ ಹಾಗೂ ಎಕ್ಕೂರು ಪ್ರದೇಶಗಳ ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ವಿವಿಧ ತಂಡ ಸ್ಪರ್ಧೆಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳ ಗ್ರಾಮೀಣ ಕ್ರೀಡಾಕೂಟವು ಇದೇ ಆದಿತ್ಯವಾರ ಜಪ್ಪಿನಮೊಗರು ಶಾಲಾ ಬಳಿ ಎರ್ಮಜಲ್ ಗುತ್ತು ದಿ| ಸಂಕಪ್ಪ ರೈಯವರ ಕುಟುಂಬಸ್ಥರ ಗಣೇಶ ಮಂಟಪ ಮೈದಾನದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಶ್ರೀಮತಿ ಅಕ್ಷತಾ ಮಹೇಂದ್ರ ಹಾಗೂ ಶ್ರೀ ಮಹೇಂದ್ರ ಪೂಜಾರಿ ವೈದ್ಯನಾಥನಗರ, ಜಪ್ಪಿನಮೊಗರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ನ್ಯಾಯವಾದಿ ಶ್ರೀ ಮೋಹನ್ ದಾಸ್ ರೈ ಯವರು ವಹಿಸಿದ್ದು, ಕ್ರೀಡಾಂಗಣದ ಉದ್ಘಾಟನೆಯನ್ನು ಶ್ರೀಮತಿ ವೀಣಾ ಮನೋಜ್ ಪೂಜಾರಿ ಮತ್ತು ಶ್ರೀ ಮನೋಜ್ ಪೂಜಾದಿ ಕಂರ್ಬೆಟ್ಟುರವರು (ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಮಂದಿರ(ರಿ) ಜಪ್ಪಿನಮೊಗರು] ಮಾಡಿದರು. ಮುಖ್ಯ ಅತಿಥಿಗಳಾಗಿ ಲ| ಸಚ್ಚಿದಾನಂದ ಶೆಟ್ಟಿ ಉದ್ಯಮಿ( ಮಾಜಿ ಅಧ್ಯಕ್ಷರು ಲಯನ್ಸ್ ಕ್ಲಬ್ ಕುಡ್ಲ), ಶ್ರೀ ಟಿ. ಪ್ರವೀಣ್‌ಚಂದ್ರ ಅಳ್ವ (ನಿಕಟ ಪೂರ್ವ ಕಾರ್ಪೋರೇಟರ್) ಶ್ರೀ ಬಿ. ನಾಗೇಶ್ ಶೆಟ್ಟಿ (ಟ್ರಸ್ಟಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಜಾಲ್) ಡಾ| ಧನ್ಯ ಎಸ್. ರಾವ್ (ಡೆಂಟಲ್ ಸರ್ಜನ್, ಎ.ಜೆ. ಆಸ್ಪತ್ರೆ ಮಂಗಳೂರು) ಶ್ರೀ ಉಮನ ಪೂಜಾರಿ ಪ್ರಧಾನ ಅರ್ಚಕರುಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೇವಸ್ಥಾನ) ಶ್ರೀ ನಿಸಾರ್ ಕರಾವಳಿ ಬಜಪೆ ಉದ್ಯಮಿ, ಶ್ರೀ ಸಿರಾಜ್ ಬಜಪ್ (ಉದ್ಯಮಿ) ಮೊದಲಾದ ಗಣ್ಯರು ಭಾಗವಹಿಸಿದ್ದರು.
ಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮಹಿಳೆಯರಿಗೆ ವಿಶೇಷ ಸ್ಪರ್ಧೆಗಳಾದ ತೆಂಗಿನ ಗರಿಯಿಂದ ಪೊರಕೆ ತಯಾರಿಸುವುದು, ತೆಂಗಿನ ಕಾಯಿಯ ಸಿಪ್ಪೆ ಸುಲಿಯುವ ಸ್ಪರ್ಧೆ ನಡೆಯಿತು. ತಂಡ ಸ್ಪರ್ಧೆಗಳಲ್ಲಿ ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ, ಮಹಿಳೆಯರ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಮುಕ್ತ ಮಡಕೆ ಒಡೆಯುವ ಸ್ಪರ್ಧೆ ಮುಂತಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಯಂಗ್ ಬಾಯ್ಸ್ ಕುಮಾರ ತಂಡ ಪ್ರಥಮ ಸ್ಥಾನ ಪಡೆದರೆ ಪಕ್ಕಲಡ್ಕ ಯುವಕ ಮಂಡಲ ತಂಡವು ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ತ್ರೋಬಾಲ್ ಸ್ಪರ್ಧೆಯಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಟೀಮ್ ಫ್ರೆಂಡ್ಸ್ ಬಜಾಲ್ ತಂಡಗಳಿಸಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅರಸು ಪೆಂಡ್ಸ್ ಅಸೋಸಯೇಷನ್ (ರಿ) ಜಪಿನಮೊಗರು ತಂಡ ಪ್ರಶಸ್ತಿ ಗೆದ್ದುಕೊಂಡಿತು. ಜನತಾವ್ಯಾಯಮ ಶಾಲೆ ಬಜಾಲ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಟೀಮ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಹಾಗೂ ಅರಸು ಫ್ರೆಂಡ್ಸ್ ಅಸೋಸಿಯೇಷನ್ (ರಿ) ಜಪ್ಪಿನಮೊಗರು ತಂಡ ದ್ವಿತೀಯ ಸ್ಥಾನ ಗಳಿಸಿತು.

LEAVE A REPLY

Please enter your comment!
Please enter your name here