ಎಸ್.ವಿ.ಭಟ್ ಅವರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮರಣಿಕೆ ಪ್ರಶಸ್ತಿ

0
32

ಖ್ಯಾತ ಪ್ರಸಂಗಕರ್ತ, ಅರ್ಥಧಾರಿ, ಶ್ರೇಷ್ಠ ಶಿಕ್ಷಕರಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ಈ ಬಾರಿಯ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರೂ, ಪಾರಂಪರಿಕ ಯಕ್ಷಗಾನದ ಬಗ್ಗೆ ಅಪಾರ ಅನುಭವ ಹೊಂದಿರುವ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ವಿ.ಭಟ್ ಇವರಿಗೆ 7.10.2025 ಗುರುಪುರದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಳದ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಮತ್ತು ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಎಸ್‌.ವಿ. ಉದಯಕುಮಾರ್ ಶೆಟ್ಟಿ, ಕೆ. ದೇವಿಪ್ರಸಾದ ಶೆಟ್ಟಿ,ಪೊಲ್ಯ ಉಮೇಶ್ ಶೆಟ್ಟಿ,ಡಾ. ರವಿರಾಜ ಶೆಟ್ಟಿ, ಎಸ್. ಅಶೋಕ್ ಕುಮಾರ್ ಶೆಟ್ಟಿ, ಸೀತಾನದಿ ವಿಟ್ಠಲ ಶೆಟ್ಟಿ, ಎಸ್. ಜಯರಾಮ ಶೆಟ್ಟಿ,ಬಿ. ಭುವನಪ್ರಸಾದ ಹೆಗ್ಡೆ, ಡಾ. ಬಿ. ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here