ಸಚ್ಚೇರಿಪೇಟೆ; ಸ್ವಾತಂತ್ರ್ಯೋತ್ಸವ ಆಚರಣೆ

0
151

ಸಚ್ಚೇರಿಪೇಟೆ ಫ್ರೆಂಡ್ಸ್‌ ಸಚ್ಚೇರಿಪೇಟೆ ಹಾಗೂ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘ (ರಿ.) ಸಚ್ಚೇರಿಪೇಟೆ ಇವರ ಜಂಟಿ ಆಶ್ರಯದಲ್ಲಿ ೭೯ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಸಚ್ಚೇರಿಪೇಟೆ ಲಯನ್ಸ್‌ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಸತ್ಯಶಂಕರ್‌ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸೈನಿಕ ನವಾನಂದ ಅವರು ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕಿ ಉಷಾ ಮೂಡುಬಿದಿರೆ, ದ.ಕ. ಹಾಲು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಸುಚರಿತ ಶೆಟ್ಟಿ, ರಾಜಾರಾಮ ರೈ, ಮುಂಡ್ಕೂರು-ಕಡಂದಲೆ ಲಯನ್‌ ಕ್ಲಬ್‌ ಅಧ್ಯಕ್ಷ ಯಶವಂತ್‌ ಆಚಾರ್ಯ, ವಿಕಾಸ್‌ ಶೆಟ್ಟಿ ಬೋಳ ಪರಾರಿ, ರಮೇಶ್‌ ಶೆಟ್ಟಿ ಸಚ್ಚರಿ ಪರಾರಿ, ಪುರುಷೋತ್ತಮ ಪೂಜಾರಿ, ಸಚ್ಚೇರಿಪೇಟೆ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಐತಪ್ಪ , ಮುಂಡ್ಕೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಶ್ರೀಧರ್‌ ಸನಿಲ್‌, ಸಚ್ಚೇರಿಪೇಟೆ ಲಯನ್ಸ್‌ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಗೌರವ್‌ ಆರ್.ಕೆ., ರೇಖಾ ಮುಖ್ಯ ಶಿಕ್ಷಕಿ ಸಚ್ಚೇರಿಪೇಟೆ, ಕಾರ್ಯಕ್ರಮ ಸಂಘಟಕ ಸಂದೀಪ್‌ ಶೆಟ್ಟಿ ಸಚ್ಚರಿ ರಿಪರಾರಿ ಉಪಸ್ಥಿತರಿದ್ದರು. ದಯಾನಂದ ಎಸ್.‌ ಹಾಗೂ ಉಮೇಶ್‌ ಎಸ್.‌ ಕುಮಾರ್‌ ಸಹಕರಿಸಿದರು.

LEAVE A REPLY

Please enter your comment!
Please enter your name here