ಅ.24ರಂದು ತುಳುವೇಶ್ವರ ಸನ್ನಿಧಿಯಲ್ಲಿ ಸಹಸ್ರ ದೀಪಾರ್ಚನೆ

0
25

ವರದಿ: ಮಂದಾರ ರಾಜೇಶ್‌ ಭಟ್‌

ತುಳುನಾಡು: ಬಸ್ರೂರಿನ ಪ್ರಾಚೀನ ತುಳುನಾಡಿನ ನಾಗರೀಕತೆಯ ಪ್ರತೀಕವಾದ ಬಸ್ರೂರು ಕ್ಷೇತ್ರದ ಪವಿತ್ರ ತುಳುವೇಶ್ವರ ದೇವಾಲಯದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಚಿಂತನೆಯ ಅನುಸಾರ, ಅತ್ಯಂತ ಪ್ರಾಚೀನ ಜನಪದ ದೇವರಾದ ತುಳುವೇಶ್ವರನಿಗೆ ಸಹಸ್ರ ದೀಪಾರ್ಚನೆ ಮಾಡಿ ದೋಷ ನಿವಾರಣೆ ಮಾಡಬೇಕು ಎಂದು ದೇವತಾಪ್ರೇರಿತ ಸಂದೇಶ ದೊರೆತಿದೆ.

ಈ ಹಿನ್ನೆಲೆ, ಅಕ್ಟೋಬರ್ 24ರಂದು (ಗುರುವಾರ) ಸಂಜೆ 5:00 ಗಂಟೆಯಿಂದ ಭವ್ಯ ಸಹಸ್ರ ದೀಪಾರ್ಚನೆ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಮಹಾಯಜ್ಞದ ಉದ್ದೇಶ, ತುಳುವೇಶ್ವರ ದೇವಸ್ಥಾನದ ಮರು ವೈಭವದ ಕಾರ್ಯಗಳು ಯಶಸ್ವಿಯಾಗಲೆಂಬ ಪ್ರಾರ್ಥನೆ ಹಾಗೂ ತುಳುನಾಡಿನ ಏಕತಾ ಮತ್ತು ಭಕ್ತಿಯ ಬೆಳಕು ಎಲ್ಲೆಡೆ ಹರಡುವುದು.

ದೇವಾಲಯದಲ್ಲಿ ನಡೆಯುವ ಈ ದೀಪೋತ್ಸವದಲ್ಲಿ ಭಕ್ತರು ದೀಪ ಹಚ್ಚುವ ಮೂಲಕ ತಮ್ಮ ಕುಟುಂಬ ಮತ್ತು ತುಳುನಾಡಿನ ಸಮಗ್ರ ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಬಹುದು. ಅಲ್ಲದೆ ಪ್ರತಿ ತುಳುವರ ಮನೆಯಲ್ಲಿಯೂ ಜೋಡು ಹಣತೆ ಬೆಳಗಿಸಿ ಜಗತ್ತಿನ ಎಲ್ಲೆಡೆ ಪ್ರಾರ್ಥಿಸಬಹುದು.

ಇದೇ ಸಂದರ್ಭದಲ್ಲಿ ಸನ್ನಿಧಿಯಲ್ಲಿ, ತುಳುವೇಶ್ವರನಿಗೆ ಅತ್ಯಂತ ಇಷ್ಟವಾದ ಜನಪದ ಸೇವೆಗಳಾದ ಕಂಗಿಲು ನಲಿಕೆ,ಕೊರಗ ನಲಿಕೆ, ಕುಡುಬಿ ನಲಿಕೆ, ದೇವದಾಸಿ ಹಾಡು ಮತ್ತು ನೃತ್ಯ
ಮತ್ತು ಇತರೆ ಜನಪದ ಕಲಾ ಪ್ರಕಾರಗಳ ನಲಿಕೆ ಪ್ರದರ್ಶನ ಗಳಿಗೆ ಅವಕಾಶ ನೀಡಲಾಗಿದೆ. ಭಕ್ತರು, ಕಲಾವಿದರು ಮತ್ತು ಜನಪದ ಕಲಾ ತಂಡಗಳು ಈ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶವಿದೆ.

ಆಸಕ್ತರು ಈ ಸಂಖ್ಯೆಗೆ ಸಂಪರ್ಕಿಸಿ: 94481 21593, 8075350491

LEAVE A REPLY

Please enter your comment!
Please enter your name here