ಸೈಪುದ್ದೀನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

0
116

ಉಡುಪಿ : ಖಾಸಗಿ ಬಸ್ ಮಾಲಕ ಸೈಪುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು 1) ಮಹಮದ್‌ ಫೈಸಲ್‌ ಖಾನ್‌(27), 2) ಮೊಹಮದ್‌ ಶರೀಫ್‌ (37). 3)ಅಬ್ದುಲ್‌ ಶುಕುರ್‌(43) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳ‌ನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ದಿನಾಂಕ 27.09.25 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಯಿಪುದ್ದಿನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮಹಮದ್‌ ಫೈಸಲ್‌ ಖಾನ್‌, ತಂದೆ: ರಫೀಕ್‌ ಖಾನ್‌, ಮಿಷನ್‌ ಕಂಪೌಂಟ್‌ ಬಳಿ, 76 ಬಡಗಬೆಟ್ಟು ಗ್ರಾಮ ಉಡುಪಿ. ಮೊಹಮದ್‌ ಶರೀಫ್‌, ತಂದೆ: ದಿ. ಮೂಸಾ ಸಾಹೇಬ್‌ ವಾಸ: ಮನೆ ನಂಬ್ರ 1/109, ಜನತಾ ಕಾಲೋನಿ, ಕರಂಬಳ್ಳಿ, ಕುಂಜಿಬೆಟ್ಟು ಅಂಚೆ ಶಿವಳ್ಳಿ ಗ್ರಾಮ, ಉಡುಪಿ. ಅಬ್ದುಲ್‌ ಶುಕುರ್‌ ತಂದೆ: ದಿ. ಎಸ್‌ ಮೊಹಮದ್‌ ವಾಸ: ಲಂಡನ್‌ ಪಾರ್ಕ ಹಿಂಭಾಗ, 7ನೇ ಬ್ಲಾಕ್‌, ಕೃಷ್ಣಾಪುರ ಅಂಚೆ ಕಾಟಿಪಳ್ಳ ಗ್ರಾಮ, ಮಂಗಳೂರು ತಾಲೂಕು, ದ.ಕ ಜಿಲ್ಲೆ ಇವರನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಆರೋಪಿಗಳನ್ನು ಉಡುಪಿ ಡಿ.ಟಿ. ಪ್ರಭು, ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ರಾಮಚಂದ್ರ ನಾಯಕ್, ಪೊಲೀಸ್ ವೃತ್ತ ನಿರೀಕ್ಷಕರು, ಮಲ್ಪೆ ವೃತ್ತ ರವರ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿರುತ್ತದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here