ಸಜೀಪ ಮಾಗಣೆ ಶ್ರೀ ಮಿತ್ತ ಮಜಲು ಕ್ಷೇತ್ರ ಶ್ರೀ ನಡಿಯೇ ಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈತಾಯ ಹಾಗೂ ಪರಿವಾರ ದೈವಗಳ ಮಾಡ ಸಜೀಪ ಮೂಡ ಬಂಟ್ವಾಳ ವಾರ್ಷಿಕ ಬಿಸು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಇವರನ್ನು ಮಾಗಣೆ ವತಿಯಿಂದ ಫಲತಾಂಬೂಲಗಳನ್ನು ನೀಡಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪಾಲ ಮಂಟಮೆ ಸಂಸಾರ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರು ಗುತ್ತು ಸಂಸಾರ, ಸಜೀಪ ಗುತ್ತು ಗಡಿ ಪ್ರಧಾನರಾದ ತಿಮ್ಮಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಗಣೇಶ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರ್ನ ಆಳ್ವ , ಜೀವನ ಆಳ್ವ, ಅಂಕದ ಕೋಡಿ lಆನಂದ ರೈ, ಜಯರಾಮ ಶೆಟ್ಟಿ, ನಗ್ರಿ ಗುತ್ತು, ವಿವೇಕ ಶೆಟ್ಟಿ ನಗ್ರಿಗುತ್ತು , ರೋಹಿತ್ ಶೆಟ್ಟಿ ನಗ್ರೀ ಗುತ್ತು, ಕೇವುಲ ಶಿವಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.