ಬಂಟ್ವಾಳ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡದ ಶಂಬರ 28 ಭಾನುವಾರದಂದು ಶ್ರೀ ಕ್ಷೇತ್ರದಲ್ಲಿ ಬಾಲ ಗಣಪತಿ ಮೂಲ ಮಂತ್ರ ಲಕ್ಷ ಜಪ ಯಜ್ಞ ದೂರ್ವಾಹೋಮ ಬ್ರಹ್ಮಶ್ರೀ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದ್ದು, ವ್ಯವಹಾರ ಅನುಕೂಲಕ್ಕಾಗಿ ನೂತನ ಕಾರ್ಯಾಲಯವನ್ನು ದಿನ ರಾಜ ಪೂಜಾರಿ ದೇರಾಜೇ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು ಅಧ್ಯಕ್ಷತೆಯನ್ನು ಯಜ್ಞ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ ವಹಿಸಿದರು ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾ ಜೆ ಕಾರ್ಯಕ್ರಮದ ವಿವರ ನೀಡಿದರು. ಶಂಕರ ಪೂಜಾರಿ ಯಾನೆ ಕೋಚು ಪೂಜಾರಿ, ಹರೀಶ್ ಬಂಗೇರ, ಪ್ರಶಾಂತ್, ಸುರೇಶ್ ಬಂಗೇರ, ಲಿಂಗಪ್ಪ ದೋಟ. ರಾಮ ಬರೆ,ಮೊದಲಾದವರು ಉಪಸ್ಥಿತರಿದ್ದರು.

