ಸಜೀಪಗುತ್ತು ಶ್ರೀ ನಾಗಬನದಲ್ಲಿ ಸಪರಿವಾರ ಸಹಿತ ಶ್ರೀ ನಾಗ ದೇವರಿಗೆ ಫಲಪಂಚಾಮೃತ ಅಭಿಷೇಕ ವಿಶೇಷ ಪೂಜೆ, ನಾಗತಂಬಿಲ, ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

