ಸಜೀಪ ಮುನ್ನುರು ಶ್ರೀ ಕ್ಷೇತ್ರದಲ್ಲಿ ₹2 ಕೋಟಿ ವೆಚ್ಚದ ಸಭಾಗೃಹ ನಿರ್ಮಾಣಕ್ಕೆ ಚಾಲನೆ

0
24

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನು ರು ಶ್ರೀ ಕ್ಷೇತ್ರದ ಉತ್ತರ ಭಾಗದಲ್ಲಿ ಅಂದಾಜು ಎರಡು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣಗೊಳ್ಳಲಿರುವ ಪಾಕಶಾಲೆ ಸಹಿತ ಸುಸಜ್ಜಿತ ಸಭಾ ಗ್ರಹದ ಶಿಲನ್ಯಾಸ ಧಾರ್ಮಿಕ ವಿಧಿ ವಿಧಾನಗಳನ್ನುಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ಶ0ಕುಸ್ಥಾಪನೆಯನ್ನುಎನ್. ಎಂ .ಪಿ .ಟಿ. ಡೈರೆಕ್ಟ್ ರ್ ಡಾ ಪೃಥ್ವಿ ರಾಜ್ ನೆರವೇರಿಸಿದ ರು ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಆಚಲ್ ಕೃಷ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಎಂ ಮಹಾಬಲ ಕೊಟ್ಟಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ ರಾಧಾಕೃಷ್ಣ ಆಳ್ವ, ಶ್ರೀ ಕ್ಷೇತ್ರನ0ದಾವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ. ಸಜೀಪ ಮುನ್ನು ರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರ ಎಂ. ಸಜೀಪ ಮೂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಶ್ರೀ ಕೃಷ್ಣ ಶಿಶುಮಂದಿರ ಅಧ್ಯಕ್ಷ ಸುರೇಶ್ ಸಾರ್ ತಾವು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ಮಾಜಿ ಅಧ್ಯಕ್ಷ ಟಿ ಸುಬ್ರಾಯ ಕಾರ0ತ, ಅರ್ಚಕ ಕೃಷ್ಣ ಭಟ್, ತಂತ್ರಿ ಸೂರ್ಯನಾರಾಯಣ ಭಟ್, ಮಲರಾಯ ದೈವದಗಡಿಪ್ರದಾನ ರಾಧ ಸುಕುಮಾರ ಬಂಟವಾಳ, ಹರೀಶ್ ಗಟ್ಟಿ, ಕೆ ಸೀತಾರಾಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯ ಪಿ.ಧನಂಜಯ ಶೆಟ್ಟಿ ಎನ್ಕೆ ಶಿವ, ಹರಿಪ್ರಸಾದ್ ಭಂಡಾರಿ,ರಾಜು ಪೂಜಾರಿ, ಶ್ರೀನಿವಾಸ ನಾಯಕ, ಮಾಜಿ ಸದಸ್ಯರಾದ ಚಿತ್ರ ವರ ಕಾಯಿ, ಚಿತ್ರ ಎಸ್ ರೈ. ಪ್ರಮುಖರಾದ ವಸಂತ ರಾವ್, ಧನೇಶ್ವರ ರಾವ್, ನ್ಯಾಯವಾದಿ ದಿನೇಶ ಭಂಡಾರಿ, ಬಾಲಕೃಷ್ಣರಾವ್, ದಿರೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರೀ ತಾಯ ಆದ್ರೂಕ್ಕ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here