ಸಜೀಪ ಮುನ್ನೂರು: ಔಷಧೀಯ ಸಸ್ಯಗಳು-ಫಲ ವಸ್ತುಗಳ ಗಿಡ ನಾಟಿ

0
18

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಬಂಟ್ವಾಳ, ಶ್ರೀ ಮುದೆಲು ಮುಟ್ಟಿ ಶ್ರೀ ನಾಲ್ಕೈ ತಾಯ ದೈವಸ್ಥಾನ ಸಜೀಪ ಮುನ್ನೂರು ಶ್ರೀ ಕ್ಷೇತ್ರದ ಪರಿಸರಲ್ಲಿ ದೈವಸ್ಥಾನದ ಅನ್ನ ಛತ್ರ ಸಭಾಂಗಣದಲ್ಲಿ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ದೈವಾರಾಧನೆಯಲ್ಲಿ ಜಿಲ್ಲೆಯಲ್ಲಿ ಹೆಸರುವಾಸಿಯಾದ ಸಾವಿರದ ಒಂದು ಹಾಳೆಯ ಆ ಣಿಹೊಂದಿರುವ ಸೂಟೆದ ವಾರ ಎಂಬ ವಿಶಿಷ್ಟ ಸಂಪ್ರದಾಯ ಹೊಂದಿರುವ ಕ್ಷೇತ್ರದ ಪರಿಸರದಲ್ಲಿ ಔಷಧೀಯ ಸಸ್ಯಗಳು ಹಾಗೂ ಫಲ ವಸ್ತುಗಳ ಗಿಡಗಳನ್ನು ಬೆಳೆಸುವುದರ ಮೂಲಕ ಜೀವನದಿ ನೇತ್ರಾವತಿ ನದೀತೀರದ ಧಾರ್ಮಿಕ ಹಿನ್ನಲೆ ಯುಳ್ಳ ಗ್ರಾಮೀಣ ಭಾಗದ ಈ ಶ್ರದ್ಧಾ ಕೇಂದ್ರ ಪರಿಸರವನ್ನು ಉಳಿಸಿ ಬೆಳೆಸಿದರೆ ನಾವು ಉಳಿಯುತ್ತೇವೆ ಎಂಬ ಚಿಂತನೆಯನ್ನು ಈ ಕಾರ್ಯಕ್ರಮದ ಮೂಲಕ ನಾಡಿಗೆ ಪಸರಿಸುವಂತಾಗಲಿ ಎಂದು ಶುಭ ಹಾರೈಸಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಮಾತನಾಡಿ ,ಆಧುನಿಕತೆಯ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡಿದರೆ ನಮ್ಮನ್ನು ಪರಿಸರ ನಾಶಮಾಡುತ್ತದೆ ಜನ ಇದನ್ನು ಅರ್ಥ ಮಾಡಿ ಪರಿಸರವನ್ನು ಸ್ವಚ್ಛವಾಗಿಸುವ ಗಿಡಮರಗಳನ್ನು ನಾಟಿ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವಂತಾಗಬೇಕು ಎಂದು ತಿಳಿಸಿದರು .

ದೈವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರಗಟ್ಟಿ ಮಾತನಾಡಿ ಪರಿಸರವನ್ನು ಉಳಿಸುವುದು ನಮ್ಮ ಒಳಿತಿಗಾಗಿ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಿದರೆ ಜನರು ಸುಖವಾಗಿ ಜೀವಿಸಬಹುದು ಎಂದು ತಿಳಿಸಿದರು. ಗಡಿ ಪ್ರಧಾನರಾದ ಆಳ್ವ ರಪಾಲು ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ. ರಮಾನಾಥ ಶೆಟ್ಟಿ ಬೀರಿ ಗ್ರಾಮ ಪಂಚಾಯತ್ ಸದಸ್ಯ ಪರಾರಿ ಗುತ್ತು ಧನಂಜಯ ಶೆಟ್ಟಿ ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ವಲಯ ಮೇಲ್ವಿಚಾರಕಿ ಶಿವ ಲಕ್ಷ್ಮಿ ಶಾರದಾ ಭಜನಾ ಮಂದಿರ ಅಧ್ಯಕ್ಷ ಸತೀಶ್ ಗಟ್ಟಿ ಸೇವಾ ನಿರತೆ ಬೇಬಿ ಮೊದಲಾದವರು ಉಪಸ್ಥಿತರಿದ್ದರು. ಪರಿಸರದಲ್ಲಿ ಫಲ ವಸ್ತುಗಳ ಹಾಗೂ ಔಷಧೀಯ ಗುಣಗಳ ಸಸಿಗಳನ್ನು ನಾಟಿ ಮಾಡಲಾಯಿತು,

LEAVE A REPLY

Please enter your comment!
Please enter your name here