ಬಂಟ್ವಾಳ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಡಿಸೆಂಬರ್ 28 ರಂದು ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷ ಜಪ ಯಜ್ಞ ದೂರ್ವ ಹೋಮ ಹಾಗೂ 29ರಂದು ಚತುರ್ಥ ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದ್ದು ಇದರ ಆಮಂತ್ರಣ ಪತ್ರವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿ ಯಾಗದ ಮೂಲಕ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಿ ಸಂಕಲ್ಪ ಮಾಡಿದಂತೆ ದೇವಸ್ಥಾನದ ಮುಂಭಾಗದ ಭೂಮಿ ದೇವಸ್ಥಾನದ ಉಪಯೋಗಕ್ಕೆ ಬಾಲ ಗಣಪತಿಯ ಅನುಗ್ರಹದಿಂದ ಪಡೆದುಕೊಳ್ಳುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು.
ಯಾಗದ ಲಾಂಛನವನ್ನು ಅಭಿಮತ ವಾಹಿನಿಯ ಮಮತಾ ಶೆಟ್ಟಿ ಉದ್ಘಾಟಿಸಿ ಕ್ಷೇತ್ರದ ಕೀರ್ತಿ ದಶ ದಿಕ್ಕುಗಳಲ್ಲಿ ಪ್ರಸಿದ್ಧಿಯನ್ನು ಹೊಂದಲಿ ಎಂಬುದಾಗಿ ಶುಭ ಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾಗ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ ..ವಹಿಸಿದ್ದರು ಗಡಿ ಪ್ರಧಾನರಾದ ಶಾಂತಿ ರಾಜ ರೈ ..ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ ಶೆಟ್ಟಿ ..ಬಿಜ0ದಾರು ಗುತ್ತು ಶಿವರಾಮ ಭಂಡಾರಿ ..ಸ ಜೀಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂ0ಜ..ಸಂಜೀವ ಗುರುಸ್ವಾಮಿ.. ಶ್ರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇ ರಾ ಜೇ ಗು ತ್ತು ..ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು.. ಕೆ ಸದಾನಂದ ಶೆಟ್ಟಿ.. ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆ ರ್ವ..ಮೊದಲಾದವರು ಉಪಸ್ಥಿತರಿದ್ದರು

