ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಚೈತನ್ಯ ಶಿರೋಮಣಿ” ಪುರಸ್ಕಾರ ಪ್ರಧಾನ

0
30

ದಾವಣಗೆರೆ : ಕನ್ನಡ ನಾಡು-ನುಡಿ, ಸಾಹಿತ್ಯ, ನೆಲ-ಜಲ ಸಂಸ್ಕೃತಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆ ಮಾಡಿದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಬೆಳಗಾವಿಯ ನಾಗರಮುನ್ನೋಳಿಯ ಕವಿತ್ತಕರ್ಮಮಣಿ ಪೌಂಡೇಶನ್ ವತಿಯಿಂದ “ಚೈತನ್ಯ ಶಿರೋಮಣಿ” ಪುರಸ್ಕಾರ ರಾಜ್ಯ ಪ್ರಶಸ್ತಿಯನ್ನು ವಿತರಿಸಲಾಗಿದೆ ಎಂದು ಕವಿತ್ತಕರ್ಮಮಣಿ ಪೌಂಡೇಶನ್ ಸಂಸ್ಥಾಪಕರಾದ ಕವಿತ್ತಕರ್ಮಮಣಿ ತಿಳಿಸಿದ್ದಾರೆ.

ದಾವಣಗೆರೆಗೆ ಕರಾವಳಿ ಜಿಲ್ಲೆಗಳ ಆರಾಧನೆ ಕಲೆ ಯಕ್ಷಗಾನವನ್ನು ವೈಭವೀಕರಿಸಿದ ಶೆಣೈಯವರು ಅವಿರತವಾಗಿ ಶ್ರಮಿಸುತ್ತಿದ್ದು ಅವಕಾಶ ವಂಚಿತರಾದ ಸಾಧಕರನ್ನು ಗುರುತಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನಿರಂತರ ಕಠಿಣ ಪರಿಶ್ರಮದಿಂದ ನಾಲ್ಕು ದಶಕದ ಅಪಾರ ಜ್ಞಾನ, ಸಾಂಸ್ಕೃತಿಕ ಸಮಾಜವನ್ನು ಉಜ್ವಲಗೊಳಿಸುತ್ತಿರುವ ಇವರಿಗೆ ಮಹಾನ್ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶವ ಸನ್ಮಾಸಿ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾದ ಈ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಶೆಣೈಯವರಿಗೆ ಕವಿತ್ತಕರ್ಮಮಣಿ ಪೌಂಡೇಶನ್ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here