ದಾವಣಗೆರೆ : ಬೆಂಗಳೂರಿನ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ದಾವಣಗೆರೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕರ್ನಾಟಕ ಕರಾವಳಿ ಜಿಲ್ಲೆಗಳ ಅಪ್ಪಟ ಕನ್ನಡದ ಆರಾಧನಾ ಕಲಾ ಆಧ್ಯಾತ್ಮ ಪರಂಪರೆಯ ಯಕ್ಷಗಾನವನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಮೊಟ್ಟ ಮೊದಲು ಪರಿಚಯಿಸಿದ ಯಕ್ಷರಂಗ ಯಕ್ಷಗಾನ ಸಂಸ್ಥೆಯನ್ನು ಸ್ಥಾಪನೆ ಮಾಡಿ ಯಕ್ಷಗಾನವನ್ನು ದಾವಣಗೆರೆಯ ಮಹಿಳೆಯರಿಗೂ ತರಬೇತಿ ನೀಡಿ ನಿರಂತರ ಯಕ್ಷಗಾನ ಉಚಿತ ಪ್ರದರ್ಶನ ಮಾಡುತ್ತಾ ಬಂದಿರುವ ಹವ್ಯಾಸಿ ಯಕ್ಷಗಾನ ಕಲಾವಿದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಯಕ್ಷಗಾನ ಕ್ಷೇತ್ರವನ್ನು ಗುರುತಿಸಿ “ಸ್ಪೂರ್ತಿದಾಯಕ ವ್ಯಕ್ತಿ” ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಬೆಂಗಳೂರಿನ ಸಾಂಸ್ಕೃತಿಕ ಕಲಾ ಸಂಘದ ಸಂಸ್ಥಾಪಕರಾದ ಸಾಗರ ಆರ್.ಕಲಾದಗಿ ತಿಳಿಸಿದ್ದಾರೆ.
ವರ್ಷಪೂರ್ತಿ ನಿರಂತರವಾಗಿ ರಾಜ್ಯ, ರಾಷ್ಟç, ಅಂತರಾಷ್ಟ್ರೀಯ ಪ್ರಶಸ್ತಿಗಳು ಮುಡಿಗೇರಿಸುತ್ತಿರುವ ಶೆಣೈಯವರಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ ಸಂಸ್ಥೆ, ಬಿಚ್ಕತ್ತಿ ಕುಟುಂಬ, ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾಸಿರಿ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಶ್ರೀ ಗಾಯಿತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಗಮ ಸಂಗೀತ ಪರಿಷತ್, ಗೌಡಸಾರಸ್ವತ ಸಮಾಜ, ಕರಾವಳಿ ಮಿತ್ರ ಮಂಡಳಿ ಮುಂತಾದ ಸಂಘ-ಸAಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.

