ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್, ತನ್ನ ಹೊಸ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಝಡ್ ಫೋಲ್ಡ್7 ಸ್ಮಾರ್ಟ್ ಫೋನ್ ದೇಶದ ಕೆಲವು ಮಾರುಕಟ್ಟೆಗಳಲ್ಲಿ ಸ್ಟಾಕ್ ಖಾಲಿಯಾಗುವಷ್ಟು ಭಾರೀ ಬೇಡಿಕೆ ಹೊಂದಿದೆ ಎಂದು ತಿಳಿಸಿದೆ. ಈ ಭಾರೀ ಬೇಡಿಕೆಯನ್ನು ಪೂರೈಸಲು ಕಂಪನಿಯು ನೋಯ್ಡಾದ ತನ್ನ ಉತ್ಪಾದನಾ ಘಟಕದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸ್ಯಾಮ್‌ಸಂಗ್ ಇಂಡಿಯಾ ಈ ಹಿಂದೆ ತನ್ನ ಏಳನೇ ತಲೆಮಾರಿನ ಫೋಲ್ಡೆಬಲ್ ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್7, ಗ್ಯಾಲಕ್ಸಿ ಝಡ್ ಫ್ಲಿಪ್7 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್7 ಎಫ್ಇಗೆ ಕೇವಲ 48 ಗಂಟೆಗಳಲ್ಲಿ 2,10,000 ಪ್ರೀ-ಆರ್ಡರ್‌ಗಳನ್ನು ಪಡೆದು, ದಾಖಲೆ ಮಾಡಿತ್ತು. ಈ ಬೇಡಿಕೆಯು ಭಾರತದಲ್ಲಿ ಫೋಲ್ಡೇಬಲ್ ಫೋನ್ ಗಳು ಮುಖ್ಯವಾಹಿನಿಗೆ ಬರುತ್ತಿರುವುದನ್ನು ಸೂಚಿಸುತ್ತದೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಅವರು, “ಗ್ಯಾಲಕ್ಸಿ ಝಡ್ ಫೋಲ್ಡ್7ಗೆ ಭಾರತದ ತಂತ್ರಜ್ಞಾನ-ಪ್ರಿಯ ಗ್ರಾಹಕರು ಅದ್ಭುತ ಆರಂಭವನ್ನು ನೀಡಿರುವುದಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ದೇಶದ ಹಲವು ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯಿಂದಾಗಿ ಸ್ಟಾಕ್ ಕೊರತೆ ಎದುರಾಗಿದೆ. ಗ್ರಾಹಕರು ಗ್ಯಾಲಕ್ಸಿ ಝಡ್ ಫೋಲ್ಡ್7 ಅನ್ನು ಶೀಘ್ರವಾಗಿ ಆನಂದಿಸಲು ನಮ್ಮ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ನ ಸಾಕಷ್ಟು ಸರಬರಾಜು ಪ್ರಕ್ರಿಯೆಯನ್ನು ಮತ್ತಷ್ಟು ಉತ್ತಮಗೊಳಿಸಲು ನಾವು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದೇವೆ. ರಿಟೇಲ್ ಮಾರುಕಟ್ಟೆಗಳು ಮತ್ತು ಆನ್‌ಲೈನ್ ವೇದಿಕೆಗಳಿಂದ ಭಾರೀ ಬೇಡಿಕೆ ಎದುರಾಗಿದೆ” ಎಂದು ಹೇಳಿದರು.
ಗ್ಯಾಲಕ್ಸಿ ಝಡ್ ಫೋಲ್ಡ್7, ಇದುವರೆಗಿನ ಫೋಲ್ಡೆಬಲ್ ಗಳಿಗಿಂತ ಅತ್ಯಂತ ತೆಳುವಾದ ಮತ್ತು ಹಗುರವಾದ ವಿನ್ಯಾಸದಲ್ಲಿ ಬಂದಿದ್ದು, ಕೇವಲ 215 ಗ್ರಾಂ ತೂಕವನ್ನು ಹೊಂದಿದೆ. ಇದು ಗ್ಯಾಲಕ್ಸಿ ಎಸ್25 ಅಲ್ಟ್ರಾಗಿಂತಲೂ ಹಗುರವಾಗಿದೆ. ಇದು ಮಡಚಿದಾಗ 8.9 ಎಂಎಂ ದಪ್ಪವಾಗಿದ್ದು, ತೆರೆದಾಗ 4.2 ಎಂಎಂ ದಪ್ಪ ಇರುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್7, ಬ್ಲೂ ಶಾಡೋ, ಸಿಲ್ವರ್ ಶಾಡೋ, ಮಿಂಟ್ ಮತ್ತು ಜೆಟ್ ಬ್ಲ್ಯಾಕ್‌ನಂತಹ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಭಾರೀ ಬೇಡಿಕೆ ಕುರಿತು ಮಾತನಾಡಿರುವ ವಿಜಯ್ ಸೇಲ್ಸ್ ಸಂಸ್ಥೆಯ ನಿರ್ದೇಶಕ ನಿಲೇಶ್ ಗುಪ್ತಾ ಅವರು, “ಸ್ಯಾಮ್‌ಸಂಗ್‌ನ ಏಳನೇ ತಲೆಮಾರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು, ಅದರಲ್ಲೂ ವಿಶೇಷವಾಗಿ ಗ್ಯಾಲಕ್ಸಿ ಝಡ್ ಫೋಲ್ಡ್7, ನಮ್ಮ ಮಳಿಗೆಗಳಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿದೆ. ಪ್ರಮುಖ ನಗರಗಳಲ್ಲಿನ ನಮ್ಮ ಮಳಿಗೆಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಗ್ರಾಹಕರು ಈ ಫೋನ್‌ನ ಹೊಸತನ ಮತ್ತು ಪ್ರೀಮಿಯಂ ಅನುಭವಕ್ಕೆ ಮಾರುಹೋಗಿದ್ದಾರೆ, ಇದು ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಮೇಲಿನ ಬೇಡಿಕೆಯನ್ನು ತೋರಿಸುತ್ತದೆ” ಎಂದು ಹೇಳಿದರು.
ಎಲೆಕ್ಟ್ರಾನಿಕ್ಸ್ ಮಾರ್ಟ್ ಇಂಡಿಯಾ ಲಿಮಿಟೆಡ್‌ನ (ಬಜಾಜ್ ಎಲೆಕ್ಟ್ರಾನಿಕ್ಸ್) ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸಂದೀಪ್ ಸಿಂಗ್ ಜಾಲಿ ಅವರು ಮಾತನಾಡಿ, “ಸ್ಯಾಮ್‌ಸಂಗ್‌ನ ಏಳನೇ ತಲೆಮಾರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು, ವಿಶೇಷವಾಗಿ ಗ್ಯಾಲಕ್ಸಿ ಝಡ್ ಫೋಲ್ಡ್7 ನಮ್ಮ ರಿಟೇಲ್ ಜಾಲದಲ್ಲಿ ಅದ್ಭುತ ಮಾರಾಟ ಕಂಡಿದೆ. ಪ್ರಮುಖ ನಗರ ಪ್ರದೇಶಗಳಲ್ಲಿನ ನಮ್ಮ ಮಳಿಗೆಗಳಲ್ಲಿ ಸ್ಟಾಕ್ ಖಾಲಿಯಾಗಿದೆ” ಎಂದು ಹೇಳಿದರು.
ಪೂರ್ವಿಕಾ ಮೊಬೈಲ್ಸ್ ನ ಸಂಸ್ಥಾಪಕ ಮತ್ತು ಸಿಇಓ ಯುವರಾಜ್ ನಟರಾಜನ್ ಅವರು, “ಗ್ಯಾಲಕ್ಸಿ ಝಡ್ ಫೋಲ್ಡ್7 ಭಾರೀ ಯಶಸ್ಸನ್ನು ಕಂಡಿದ್ದು, ಎಲ್ಲಾ ಪ್ರದೇಶಗಳಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಸ್ಟಾಕ್‌ಗಳು ನಮ್ಮ ಮಳಿಗೆಗಳಿಗೆ ತಲುಪುತ್ತಿದ್ದಂತೆ ಖಾಲಿಯಾಗುತ್ತಿವೆ” ಎಂದು ಹೇಳಿದ್ದಾರೆ.
ಗ್ಯಾಲಕ್ಸಿ ಝಡ್ ಫೋಲ್ಡ್7ನಲ್ಲಿ ಲಭ್ಯವಿರುವ ಒನ್ ಯುಐ 8 ದೊಡ್ಡ ಸ್ಕ್ರೀನ್ ನ ಬಹುಕಾರ್ಯನಿರ್ವಹಣೆಯನ್ನು ಬಳಕೆದಾರರು ಟೈಪ್ ಮಾಡುವ, ಮಾತನಾಡುವ ಮತ್ತು ನೋಡುವ ಕಂಟೆಂಟ್ ಅನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತ ಟೂಲ್ ಗಳ ಜೊತೆಗೆ ಸಂಯೋಜಿಸುತ್ತದೆ. ಗೂಗಲ್‌ನ ಜೆಮಿನಿ ಲೈವ್ ಇದರಲ್ಲಿ ಲಭ್ಯವಿದ್ದು, ಬಳಕೆದಾರರು ಎಐ ಅಸಿಸ್ಟೆಂಟ್ ಜೊತೆ ಮಾತನಾಡುವಾಗ ತಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಬಹುದು. ಇದರ ಜೊತೆಗೆ, ಒನ್ ಯುಐ 8 ವೈಯಕ್ತಿಕೀಕರಿಸಿದ ಎಐ ಅನುಭವಗಳಿಗೆ ಹೊಸ ನಾಕ್ಸ್ ಎನ್ ಹಾನ್ಸ್ ಡ್ ಎನ್ ಕ್ರಿಪ್ಟೆಡ್ ಪ್ರೊಟೆಕ್ಷನ್ (ಕೆಇಇಪಿ) ಜೊತೆಗೆ ಹೆಚ್ಚಿನ ಪ್ರೈವೆಸಿ ನೀಡುತ್ತದೆ. ಕೀಪ್ ಸಾಧನದ ಸುರಕ್ಷಿತ ಸ್ಟೋರೇಜ್ ಪ್ರದೇಶದೊಳಗೆ ಎನ್‌ಕ್ರಿಪ್ಟೆಡ್ ಆದ, ಆಪ್-ನಿರ್ದಿಷ್ಟ ಸ್ಟೋರೇಜ್ ವಾತಾವರಣಗಳನ್ನು ರಚಿಸುತ್ತದೆ, ಪ್ರತಿಯೊಂದು ಆಪ್ ತನ್ನದೇ ಆದ ಸೂಕ್ಷ್ಮ ಮಾಹಿತಿಯನ್ನು ಮಾತ್ರ ಪಡೆಯುವಂತೆ ನೋಡಿಕೊಳ್ಳುತ್ತದೆ.
ಗ್ಯಾಲಕ್ಸಿ ಝಡ್ ಫೋಲ್ಡ್7ನ ಆರ್ಮರ್ ಫ್ಲೆಕ್ಸ್‌ಹಿಂಗ್ ಆರ್ಮರ್ ಫ್ಲೆಕ್ಸ್ ಹಿಂಜ್ ತೆಳುವಾಗಿ ಮತ್ತು ಹಗುರವಾಗಿದ್ದು, ಅದಕ್ಕಾಗಿ ವಾಟರ್ ಡ್ರಾಪ್ಲೆಟ್ ವಿನ್ಯಾಸಕ್ಕಾಗಿ ಧನ್ಯವಾದ ಸಲ್ಲಿಸಬೇಕು. ಹೊಸದಾಗಿ ಅಳವಡಿಸಲಾದ ಮಲ್ಟಿ-ರೈಲ್ ರಚನೆಯು ಎದ್ದು ಕಾಣುವ ಕ್ರೀಸಿಂಗ್ ಅನ್ನು ಕಡಿಮೆ. ಕವರ್ ಡಿಸ್‌ಪ್ಲೇಯು ಕಾರ್ನಿಂಗ್® ಗೊರಿಲ್ಲಾ® ಗ್ಲಾಸ್ ಸೆರಾಮಿಕ್ 2 ರಿಂದ ಮಾಡಲ್ಪಟ್ಟಿದ್ದು, ಇದು ಸ್ಫಟಿಕಗಳನ್ನು ಗಾಜಿನ ಆಧಾರದಲ್ಲಿ ಸಂಕೀರ್ಣವಾಗಿ ಜೋಡಿಸಲಾಗಿರುವ ಹೊಸ ಗ್ಲಾಸ್ ಸೆರಾಮಿಕ್ ಆಗಿದೆ. ಫ್ರೇಮ್ ಮತ್ತು ಹಿಂಜ್ ಹೌಸಿಂಗ್‌ನಲ್ಲಿರುವ ಸುಧಾರಿತ ಆರ್ಮರ್ ಅಲ್ಯೂಮಿನಿಯಂ ಫೋನ್ ನ ಶಕ್ತಿ ಮತ್ತು ಗಟ್ಟಿತನವನ್ನು ಶೇ.10ರಷ್ಟು ಹೆಚ್ಚಿಸುತ್ತದೆ. ಮೇನ್ ಡಿಸ್‌ಪ್ಲೇ ತೆಳುವಾದ ಮತ್ತು ಹಗುರವಾಗಿರಲು ಮರುರಚನೆ ಮಾಡಲಾಗಿದ್ದು, ಅದು ಬಲವಾಗಿದೆ. ಟೈಟಾನಿಯಂ ಪ್ಲೇಟ್ ಲೇಯರ್ ಅಳವಡಿಸುವ ಮೂಲಕ ಈ ಡಿಸ್ ಪ್ಲೇ ರಚಿಸಲಾಗಿದೆ. ಹೆಚ್ಚುವರಿಯಾಗಿ, ಅಲ್ಟ್ರಾ-ಥಿನ್ ಗ್ಲಾಸ್ (ಯುಟಿಜಿ) ನ ದಪ್ಪವನ್ನು ಶೇ.50ರಷ್ಟು ಹೆಚ್ಚಿಸಲಾಗಿದ್ದು, ಇದು ಡಿಸ್‌ಪ್ಲೇಯನ್ನು ಗಟ್ಟಿಗೊಳಿಸುತ್ತದೆ.
ಗ್ಯಾಲಕ್ಸಿ ಝಡ್ ಫೋಲ್ಡ್7 ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಫಾರ್ ಗ್ಯಾಲಕ್ಸಿಯಿಂದ ಚಾಲಿತವಾಗಿದ್ದು, ಹಿಂದಿನ ಜನರೇಷನ್ ಗಿಂತ ಎನ್ ಪಿ ಶೇ.41ರಷ್ಟು, ಸಿಪಿಯು ಶೇ.38ರಷ್ಟು ಮತ್ತು ಜಿಪಿಯು ಶೇ.26ರಷ್ಟು ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಶಕ್ತಿಯು ಗ್ಯಾಲಕ್ಸಿ ಝಡ್ ಫೋಲ್ಡ್7 ಗೆ ಸುಲಭವಾಗಿ ಆನ್-ಡಿವೈಸ್ ಎಐ ಅನುಭವಗಳನ್ನು ಒದಗಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇದರ ಗ್ಯಾಲಕ್ಸಿ ಝಡ್ ಸರಣಿಯಲ್ಲಿ ಮೊದಲ ಬಾರಿಗೆ 200 ಎಂಪಿ ವೈಡ್-ಆಂಗಲ್ ಕ್ಯಾಮೆರಾವನ್ನು ಒದಗಿಸಲಾಗುತ್ತಿದ್ದು, ಇದು 4 ಪಟ್ಟು ಹೆಚ್ಚು ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯುತ್ತದೆ. ಶೇ.44ರಷ್ಟು ಪ್ರಕಾಶಮಾನವಾದ ಚಿತ್ರಗಳನ್ನು ಒದಗಿಸುತ್ತದೆ. ಸ್ಯಾಮ್‌ಸಂಗ್‌ನ ಮುಂದಿನ ಜನರೇಷನ್ ನ ಪ್ರೊವಿಷುವಲ್ ಎಂಜಿನ್, ಚಿತ್ರಗಳನ್ನು ವೇಗವಾಗಿ ಪ್ರೊಸೆಸ್ ಮಾಡುತ್ತದೆ.