ಮುಂಬೈನಲ್ಲಿಭವಿಷ್ಯಕೇಂದ್ರಿತಬಿಸಿನೆಸ್ಎಕ್ಸ್‌ಪೀರಿಯನ್ಸ್ಸ್ಟುಡಿಯೋಉದ್ಘಾಟಿಸಿದಸ್ಯಾಮ್‌ಸಂಗ್

0
12

• ಈ ಸ್ಟುಡಿಯೋ ಬಿ2ಬಿ ಪಾಲುದಾರರಿಗೆ ವಿಶಾಲವಾದ ಸಂಯೋಜಿತ ಬಿಸಿನೆಸ್ ಪರಿಹಾರೋತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಸಾಧನಗಳನ್ನು ಸಂಯೋಜಿತವಾಗಿ ಬಳಸಿಕೊಳ್ಳುವ ಬಗೆಯನ್ನು ತಿಳಿಸಿಕೊಡಲಿದೆ.
• 6,500 ಚದರ ಅಡಿಗಳ ವಿಶಾಲವಾದ ಶೋರೂಮ್ ಅನ್ನು ಉದ್ಯಮಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಶೋಧನೆ, ಯೋಜನೆ ಮತ್ತು ಹೊಸ ಆವಿಷ್ಕಾರ ಮಾಡಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
• ಮುಂಬೈನಲ್ಲಿ ಉದ್ಘಾಟಿಸಲಾದ ಸ್ಯಾಮ್‌ ಸಂಗ್ ಬಿಸಿನೆಸ್ ಎಕ್ಸ್‌ಪೀರಿಯನ್ಸ್ ಸ್ಟುಡಿಯೋ ಈ ರೀತಿಯ ಸೌಲಭ್ಯಗಳಲ್ಲಿ ಎರಡನೇಯದಾಗಿದ್ದು, ಈಗಾಗಲೇ ಗುರುಗ್ರಾಮದಲ್ಲಿ ಕಂಪನಿಯ ಎಕ್ಸಿಕ್ಯೂಟಿವ್ ಬ್ರೀಫಿಂಗ್ ಸೆಂಟರ್ (ಇಬಿಸಿ) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಬೆಂಗಳೂರು, ಭಾರತ – ಜುಲೈ 24, 2025: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಮುಂಬೈನ ಗೋರೆಗಾಂವ್ ಈಸ್ಟ್ ನಲ್ಲಿರುವ ಒಬೆರಾಯ್ ಕಾಮರ್ಜ್-II ಇಂಟರ್‌ನ್ಯಾಷನಲ್ ಬಿಸಿನೆಸ್ ಪಾರ್ಕ್‌ ನ 28ನೇ ಮಹಡಿಯಲ್ಲಿ ಅತ್ಯಾಧುನಿಕ ಬಿಸಿನೆಸ್ ಎಕ್ಸ್‌ ಪೀರಿಯನ್ಸ್ ಸ್ಟುಡಿಯೋ (ಬಿಇಎಸ್) ಅನ್ನು ಉದ್ಘಾಟಿಸಿದೆ.

ಈ ಭವಿಷ್ಯ ಕೇಂದ್ರಿತ ಸ್ಟುಡಿಯೋದಲ್ಲಿ ಬಿ2ಬಿ ಪಾಲುದಾರರಿಗೆ ವಿಶಾಲವಾದ ಸಂಯೋಜಿತ ಉದ್ಯಮ ಪರಿಹಾರೋತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಸಾಧನಗಳ ಸಂಯೋಜಿತ ಬಳಕೆಯನ್ನು ಪ್ರದರ್ಶಿಸಲಾಗುತ್ತದೆ. 6,500 ಚದರ ಅಡಿಗಳಷ್ಟು ವಿಶಾಲ ವಿಸ್ತೀರ್ಣದಲ್ಲಿರುವ ಈ ಶೋರೂಮ್ ಅನ್ನು ಉದ್ಯಮಗಳಿಗೆ ವಿವಿಧ ವಾಣಿಜ್ಯ ಕ್ಷೇತ್ರಗಳಲ್ಲಿ ಶೋಧನೆ, ಯೋಜನೆ, ಮತ್ತು ಆವಿಷ್ಕಾರ ಮಾಡಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಮುಂಬೈನ ಬಿಇಎಸ್ ಇಂಥಾ ಸೌಲಭ್ಯಗಳಲ್ಲಿ ಎರಡನೇಯದಾಗಿದ್ದು, ಈಗಾಗಲೇ ಗುರುಗ್ರಾಮದಲ್ಲಿರುವ ಸ್ಯಾಮ್‌ಸಂಗ್‌ನ ಎಕ್ಸಿಕ್ಯೂಟಿವ್ ಬ್ರೀಫಿಂಗ್ ಸೆಂಟರ್ (ಇಬಿಸಿ) ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕಂಪನಿಯ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ಬಿ2ಬಿ ಪರಿಹಾರೋತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.

 ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷಿಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಅವರು, “ಸ್ಯಾಮ್‌ಸಂಗ್‌ನಲ್ಲಿ ನಾವು ಉದ್ಯಮ ಕ್ಷೇತ್ರದ ಭವಿಷ್ಯ ಇರುವುದು ಮಾನವ ಕೇಂದ್ರಿತ, ಸಂಪರ್ಕಿತ ಮತ್ತು ಸುಸ್ಥಿರವಾದ ಬುದ್ಧಿವಂತ ಅನುಭವಗಳನ್ನು ಒದಗಿಸುವುದರಲ್ಲಿ ಎಂದು ನಾವು ನಂಬುತ್ತೇವೆ. ಮುಂಬೈನ ಬಿಸಿನೆಸ್ ಎಕ್ಸ್‌ ಪೀರಿಯನ್ಸ್ ಸ್ಟುಡಿಯೋ ಈ ದೃಷ್ಟಿಕೋನಕ್ಕೆ ಪೂರಕವಾಗಿ ಮೂಡಿಬಂದಿದ್ದು, ಇದು ಉದ್ಯಮಗಳು ನಮ್ಮ ಅತ್ಯಾಧುನಿಕ ಎಐ ಆಧಾರಿತ ಆವಿಷ್ಕಾರಗಳನ್ನು ನೈಜ-ಪ್ರಪಂಚದ ವಾತಾವರಣದಲ್ಲಿ ಅನುಭವಿಸಬಹುದಾದ ವಿಶೇಷ ಸ್ಥಳವಾಗಿದೆ. ಸ್ಮಾರ್ಟ್ ಕ್ಲಾಸ್‌ ರೂಮ್‌ ಗಳಿಂದ ಹಿಡಿದು ಆಟೋಮೇಟೆಡ್ ಹೋಟೆಲ್‌ ಗಳವರೆಗೆ, ಬುದ್ಧಿವಂತ ಆರೋಗ್ಯ ಸೇವಾ ಉಪಕರಣಗಳಿಂದ ಹಿಡಿದು ಕಾಗದರಹಿತ ಬ್ಯಾಂಕಿಂಗ್‌ ವರೆಗೆ ನಾವು ಹಲವಾರು ಅರ್ಥಪೂರ್ಣ, ದಕ್ಷ, ಮತ್ತು ವಿಶೇಷ ಡಿಜಿಟಲ್ ಬದಲಾವಣೆಯನ್ನು ಸಾಧ್ಯಗೊಳಿಸುತ್ತಿದ್ದೇವೆ. ಈ ಸ್ಟುಡಿಯೋ ಕೇವಲ ತಂತ್ರಜ್ಞಾನದ ಪ್ರದರ್ಶನ ಮಾತ್ರವೇ ಅಲ್ಲ, ಬದಲಿಗೆ ಭಾರತ ಮತ್ತು ವಿಶ್ವದಾದ್ಯಂತ ನಮ್ಮ ಪಾಲುದಾರರೊಂದಿಗೆ ಉದ್ಯಮದ ಭವಿಷ್ಯವನ್ನು ರೂಪಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದರು.

ಮುಂಬೈನ ಬಿಇಎಸ್ ಉದ್ಘಾಟನೆ ಕುರಿತು ಮಾತನಾಡಿದ ಮಹಾರಾಷ್ಟ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವರಾದ ಆಶಿಶ್ ಶೆಲಾರ್ ಅವರು, “ಡಿಜಿಟಲ್ ಇಂಡಿಯಾ ಅಭಿಯಾನವನ್ನು ನಾವು ತೀವ್ರಗೊಳಿಸುತ್ತಿರುವ ಈ ವೇಳೆಯಲ್ಲಿ ಎಐ ಮತ್ತು ವಿಆರ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಉದ್ಯಮಗಳ ಕಾರ್ಯನಿರ್ವಹಣೆ, ಸೇವಾ ಸೌಲಭ್ಯ ಮತ್ತು ನಾಗರಿಕರ ಅನುಭವವನ್ನೇ ಬದಲಿಸುತ್ತಿವೆ. ಮುಂಬೈ ಈ ಬದಲಾವಣೆಯ ಮುಂಚೂಣಿಯಲ್ಲಿದೆ ಮತ್ತು ಆವಿಷ್ಕಾರ, ಸಹಭಾಗಿ, ಮತ್ತು ಭವಿಷ್ಯ ಸಿದ್ಧವಾದ ವ್ಯವಸ್ಥೆ ರೂಪಿಸಲು ಪ್ರೋತ್ಸಾಹಿಸುತ್ತಿದೆ. ಸ್ಯಾಮ್‌ಸಂಗ್‌ ನ ಬಿಸಿನೆಸ್ ಎಕ್ಸ್‌ ಪೀರಿಯನ್ಸ್ ಸ್ಟುಡಿಯೋ ಈ ಪಯಣಕ್ಕೆ ಒಂದು ಮಹತ್ವದ ಸೇರ್ಪಡೆಯಾಗಿದ್ದು, ಜಾಗತಿಕ ತಂತ್ರಜ್ಞಾನವನ್ನು ನಮ್ಮ ಉದ್ಯಮಗಳಿಗೆ ಹತ್ತಿರವಾಗಿಸುತ್ತದೆ ಮತ್ತು ಡಿಜಿಟಲ್ ಆವಿಷ್ಕಾರ ವಿಚಾರದಲ್ಲಿ ಮಹಾರಾಷ್ಟ್ರವನ್ನು ಮುಂಚೂಣಿಯಲ್ಲಿ ನಿಲ್ಲಿಸಲಿದೆ” ಎಂದರು.

ಮುಂಬೈನ ಬಿಇಎಸ್, ಸ್ಟಾರ್ಟ್‌ಅಪ್‌ ಗಳು, ಶಾಲೆಗಳು, ಹೋಟೆಲ್‌ ಗಳು, ಆಸ್ಪತ್ರೆಗಳು, ಮತ್ತು ಬ್ಯಾಂಕ್‌ ಗಳಂತಹ ವಿವಿಧ ಕ್ಷೇತ್ರಗಳ ಗ್ರಾಹಕರಿಗೆ ಡಿಜಿಟಲ್ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲು ನೈಜ ಪ್ರಪಂಚದ ಸನ್ನಿವೇಶಗಳನ್ನು ಪ್ರದರ್ಶಿಸುವ ವಿಶೇಷ ಝೋನ್‌ ಗಳ ಮೂಲಕ ಕಸ್ಟಮೈಸ್ ಮಾಡಿದ ಅದ್ಭುತ ಅನುಭವವನ್ನು ಒದಗಿಸುತ್ತದೆ.

ಉದಾಹರಣೆಗೆ, ಝೋನ್ 1ರಲ್ಲಿ, ಸಂದರ್ಶಕರು ಶಿಕ್ಷಣ, ರಿಟೇಲ್ ಮತ್ತು ಹಣಕಾಸು, ಆರೋಗ್ಯ ಸೇವಾ ಕ್ಷೇತ್ರಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಪರಿಹಾರೋತ್ಪನ್ನಗಳನ್ನು ವೀಕ್ಷಿಸಲಿದ್ದಾರೆ. ಇಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್‌ ಮತ್ತು ಕ್ಯಾಂಪಸ್ ಪರಿಹಾರೋತ್ಪನ್ನಗಳಾದ ಸ್ಯಾಮ್‌ಸಂಗ್‌ನ ಮುಂದಿನ ತಲೆಮಾರಿನ ಇಂಟರಾಕ್ಟಿವ್ ಡಿಸ್‌ಪ್ಲೇಗಳು, ಟ್ಯಾಬ್ಲೆಟ್‌ಗಳು, ಮತ್ತು ಡಿಜಿಟಲ್ ನೋಟಿಸ್ ಬೋರ್ಡ್‌ಗಳನ್ನು ಕಾಣಬಹುದು. ಇವೆಲ್ಲವೂ ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನೂ ಪ್ರದರ್ಶಿಸಲಾಗುತ್ತದೆ. ಡಿಜಿಟಲ್ ಜಾಹೀರಾತು ಉತ್ಪನ್ನಗಳು, ಸಾಫ್ಟ್ ಪಿಓಎಸ್ ಸಿಸ್ಟಮ್‌ ಗಳು, ಗಾಳಿಯ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳು ಮತ್ತು ಅತ್ಯಾಧುನಿಕ ರೋಗನಿರ್ಣಯ ಉಪಕರಣಗಳು ಇತ್ಯಾದಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಇವೆಲ್ಲವೂ ರಿಟೇಲ್ ಮತ್ತು ಹಣಕಾಸು ಹಾಗೂ ಆರೋಗ್ಯ ಸೇವಾ ವಿಭಾಗಗಳಿಗೆ ಅವಶ್ಯವಾಗಿದೆ.

ಝೋನ್ 2 ರಲ್ಲಿ ಥೀಮ್ ಏಕೀಕೃತ ಪರಿಹಾರೋತ್ಪನ್ನಗಳು ಲಭ್ಯವಿದ್ದು, ಇಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್ ಥಿಂಗ್ಸ್ ಪ್ರೊ ವ್ಯವಸ್ಥೆಯು ಮೀಟಿಂಗ್ ರೂಮ್‌ ಗಳು ಮತ್ತು ಹೋಟೆಲ್ ರೂಮ್‌ ಗಳನ್ನು ಎಐ ಆಧರಿತ ವ್ಯವಸ್ಥೆಯ ಮೂಲಕ ಹೇಗೆ ಬದಲಿಸಿಕೊಳ್ಳಬಹುದು ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಸ್ಯಾಮ್‌ಸಂಗ್‌ನ ಅತ್ಯಾಕರ್ಷಕ ಡಿಸ್‌ಪ್ಲೇ ಆಗಿರುವ ದಿ ವಾಲ್ ವ್ಯವಸ್ಥೆಯು, ಆಟೋಮೋಟಿವ್, ಸರ್ಕಾರ, ಆತಿಥ್ಯ ವಲಯ ಮತ್ತು ಕಾರ್ಪೊರೇಟ್ ಕ್ಷೇತ್ರಗಳಲ್ಲಿ ವಿವಿಧ ಸನ್ನಿವೇಶಗಳಲ್ಲಿ ಅವಶ್ಯವಿರುವ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲು ನೆರವಾಗುತ್ತದೆ.

ಇದೇ ರೀತಿ, ಝೋನ್ 3 ರಲ್ಲಿ, ಗ್ರಾಹಕರು ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಒಳಗೊಂಡಿರುವ ಪರಿಹಾರೋತ್ಪನ್ನಗಳನ್ನು ಕಂಡುಕೊಳ್ಳಬಹುದು. ಇದರಲ್ಲಿ ಮೈಕ್ರೊವೇವ್, ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳು, ಟಿವಿಗಳು, ಏಸಿಗಳು, ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ಗಳು ಸೇರಿವೆ. ಇವು ಕೋ-ಲಿವಿಂಗ್ ಮತ್ತು ಸ್ಟಾರ್ಟ್‌ಅಪ್‌ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉದ್ಯಮಗಳ ಅಗತ್ಯಗಳನ್ನು ಪೂರೈಸುತ್ತವೆ. ಜೊತೆಗೆ ವಾಣಿಜ್ಯ ಸ್ಥಳಗಳಿಗಾಗಿ ಬೇಕಾಗುವ ಸಿಸ್ಟಮ್ ಏಸಿಗಳ ಪ್ರದರ್ಶನವೂ ಇದೆ. ಸ್ಮಾರ್ಟ್ ಹೋಮ್ ಪರಿಹಾರೋತ್ಪನ್ನಗಳನ್ನು ಹುಡುಕುವ ಗ್ರಾಹಕರಿಗೆ, ಝೋನ್ 4ರಲ್ಲಿ ಕನೆಕ್ಟೆಡ್ ಬೆಡ್‌ ರೂಮ್‌ ಗಳು, ಕಿಚನ್‌ ಗಳು, ಮತ್ತು ಲಿವಿಂಗ್ ರೂಮ್‌ ಗಳನ್ನು ಅನುಕರಿಸುವ ದೃಶ್ಯಗಳ ಪ್ರದರ್ಶನ ಲಭ್ಯವಿದೆ.  ಜೊತೆಗೆ ಇತ್ತೀಚಿನ ಆವಿಷ್ಕಾರಗಳನ್ನು ಒಳಗೊಂಡ ಆಕರ್ಷಕ ಗೇಮಿಂಗ್ ಮತ್ತು ಹೋಮ್ ಸಿನಿಮಾ ಝೋನ್‌ ಗಳು ಟೆಕ್ ಉತ್ಸಾಹಿಗಳನ್ನೂ ಆಶ್ಚರ್ಯಗೊಳಿಸುವಂತೆ ರೂಪುಗೊಂಡಿವೆ.

LEAVE A REPLY

Please enter your comment!
Please enter your name here