ಸಾಂಚಿ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ : 2024-2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

0
68

ಸಾಂಚಿ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ ಇದರ 2024-2025ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 20-09-2025ನೇ ಶನಿವಾರ ಮದ್ಯಾಹ್ನ 3.00ಗಂಟೆಗೆ ಸಂಘದ ಅಧ್ಯಕ್ಷರಾದ ಶ್ರೀಯುತ ಸಚಿನ್‌ ಕರ್ಕಡ ಇವರ ಅಧ್ಯಕ್ಷತೆಯಲ್ಲಿ ಕಿನ್ನಿಮುಲ್ಕಿ ವೀರಭದ್ರ ಪ್ರಾಂಗಣದಲ್ಲಿ ನಡೆಯಿತು. ಸಂಘವು ವರದಿ ಸಾಲಿನಲ್ಲಿ 34ಕೋಟಿ ರೂ. ವ್ಯವಹಾರ ನಡೆಸಿ ರೂ. 14,21,806.06 ಲಕ್ಷ ನಿವ್ವಳ ಲಾಭವು ಪಡೆದಿರುತ್ತದೆ. ಸಂಘವು ಸತತವಾಗಿ ಲಾಭವನ್ನು ಗಳಿಸಿದ್ದು 12ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ. 10% ಡಿವಿಡೆಂಡ್ ಘೋಷಿಸಲಾಯಿತು. ಸಹಕಾರಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸಚಿನ್‌ ಕರ್ಕಡ, ಉಪಾಧ್ಯಕ್ಷರಾದ ಸಿಂತಿಯಾ ಡೇಸಾ, ನಿರ್ದೇಶಕರುಗಳಾದ ಜಯರಾಮ್ ನೀಲಾವರ, ರಮೇಶ್‌ ಅಮೀನ್, ಕುಮಾರ್ ಎ ಶೆಟ್ಟಿ, ಹಡ್ಸನ್‌ ಜಯಕರ್‌ ಜತ್ತನ್ನ, ಅಭಿಷೇಕ್ ಮಹಾಲೆ ಹಾಗೂ ಕಾರ್ಯದರ್ಶಿಯಾದ ಅನಿಶ ಜೇಶ್ಮ ಡಿಸೋಜ, ಎ ತರಗತಿಯ ಸದಸ್ಯರು, ಗ್ರಾಹಕರು, ಪಿಗ್ಮಿ ಸಂಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here