ಸಾಣೂರು: ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ ಸಾಣೂರು ಕರಿಯಕಲ್ಲು ಇಲ್ಲಿ ಆ. 19ರಂದು ಶ್ರೀ ನಾಗದೇವರ ಏಳನೇ ಪ್ರತಿಷ್ಠಾ ವರ್ದಂತಿ ಪ್ರಯುಕ್ತ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ. ಕಿಶೋರ್ ಶಾಂತಿ ಅವರ ನೇತೃತ್ವದಲ್ಲಿ ಸಾಮೂಹಿಕ ಅಶ್ಲೇಷ ಬಲಿ ಹಾಗೂ ನಾಗಪಾತ್ರಿ ದಯಾನಂದ ಧರ್ಮದರ್ಶಿ ಇವರಿಂದ ನಾಗದರ್ಶನ ನಡೆಯಲಿರುವುದು.
ಬೆಳಿಗ್ಗೆ 10.05 ಗಂಟೆಯಿಂದ ಸಾಮೂಹಿಕ ಆಶ್ಲೇಷ ಬಲಿ ಆರಂಭಗೊಳ್ಳಲಿದ್ದು, 12.05ರಿಂದ ನಾಗ ಸಂದರ್ಶನ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

