ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ವಾರ್ಷಿಕ ಮಹಾಸಭೆ:1ಕೋಟಿ. ಲಾಭ,14% ಡಿವಿಡೆಂಡ್‌ ಘೋಷಣೆ

0
73

ಕುಂದಾಪುರ:ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ತಲ್ಲೂರು ಅದರ 2024-25ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ತಲ್ಲೂರು ಜೈ ದುರ್ಗಾ ಮಾತಾ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸಂಘದ ಸಿಇಒ ವಿಶಾಲ ದೇವಾಡಿಗ ವಾರ್ಷಿಕ ವರದಿ ಮಂಡಿಸಿ ಸದಸ್ಯರಿಂದ ಅನುಮೋದನೆಯನ್ನು ಪಡೆದು ಕೊಂಡರು.

ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಹರ್ಕೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವ ಸಹಾಯ ಸಂಘಗಳನ್ನು ಹುಟ್ಟು ಹಾಕುವುದರ ಮೂಲಕ ಸಮುದಾಯದ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ತುಂಬುವ ಕೆಲಸ ಸಂಘದ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ.ಅನಾರೋಗ್ಯಕ್ಕೆ ಒಳಗಾದ ಸಂಘದ ಸದಸ್ಯರಿಗೆ
ವೈದ್ಯಕೀಯ ನೆರವು ಹಾಗೂ ಅಕಾಲಿಕವಾಗಿ ಮೃತಪಟ್ಟ ವರಿಗೆ ಸಹಾಯಧನ ನೀಡಲಾಗಿದ್ದು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಾ ಬರಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದುವುದು ಸಂಘದ ಮುಖ್ಯ ಗುರಿಯಾಗಿದೆ ಎಂದರು.


ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ರಾಜೇಶ್ ದೇವಾಡಿಗ ತ್ರಾಸಿ ಮಾತನಾಡಿ,2011 ರಲ್ಲಿ ಆರಂಭ ಗೊಂಡಿರುವ ನಮ್ಮ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದ್ದು, ನಾಗೂರು ಮತ್ತು ಚಿತ್ತೂರಿನಲ್ಲಿ ಎರಡು ಹೊಸ ಶಾಖೆಗಳನ್ನು ಹೊಂದಿದೆ ಕಳೆದ ಸಾಲಿನ ವರದಿ ವರ್ಷದಲ್ಲಿ 70 ಲಕ್ಷ.ರೂ ಲಾಭ ಗಳಿಸಿದ ನಮ್ಮ ಸಂಸ್ಥೆ ಈ ವರ್ಷ 1ಕೋಟಿ.ರೂ ಲಾಭ ಗಳಿಸಿದೆ.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 14% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸ್ವ ಸಾಹಯ ಸಂಘದ ಸದಸ್ಯರಿಗೆ 10 ಕೋಟಿ.ರೂ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ ನಾಡ, ನಿರ್ದೇಶಕರಾದ ಎಮ್. ಸಂಜೀವ ದೇವಾಡಿಗ ತಲ್ಲೂರು,ಬಾಬು ದೇವಾಡಿಗ ಹೆಮ್ಮಾಡಿ, ಬಸವ ದೇವಾಡಿಗ ಉಪ್ಪಿನ ಕುದ್ರು, ರಾಜೇಶ್ ದೇವಾಡಿಗ ತ್ರಾಸಿ,ಶಾರದಾ ದೇವಾಡಿಗ ನಾಗೂರು, ಶೀಲಾವತಿ ದೇವಾಡಿಗ ಪಡುಕೋಣೆ,ಸುಮ ದೇವಾಡಿಗ ಹೆಮ್ಮಾಡಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲ ದೇವಾಡಿಗ ಸ್ವಾಗತಿಸಿದರು.ದೀಪಿಕಾ ಎನ್ ದೇವಾಡಿಗ ನಿರೂಪಿಸಿದರು. ಸುಶೀಲ ದೇವಾಡಿಗ ವಂದಿಸಿದರು.

LEAVE A REPLY

Please enter your comment!
Please enter your name here