ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕÀ ಶಾಲಾ ಸಭಾಭವನದಲ್ಲಿ ದಿನಾಂಕ ೨೫/೧೦/೨೦೨೫ರ ಶನಿವಾರದಂದು ಸರ್ವಧರ್ಮ ಭಜನಾ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಮ್ಮಟವನ್ನು ನಮ್ಮ ಶಾಲಾ ಸಂಚಾಲಕರಾದ ಶ್ರೀ.ಕೆ.ಹೇಮರಾಜ್ ಇವರು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಮಾತುಗಳಲ್ಲಿ ಭಜನೆಯು ಮಕ್ಕಳಲ್ಲಿ ಉಚ್ಛಾರಣಾ ದೋಷವನ್ನು ಸರಿಪಡಿಸುವಲ್ಲಿ ಸಹಕಾರಿಯಾಗಿದ್ದು , ಈ ಹಿಂದೆಯೂ ನಮ್ಮ ಶಾಲೆಯಲ್ಲಿ ಭಜನೆ ನಡೆಯುತ್ತಿದ್ದುದನ್ನು ಸ್ಮರಿಸಿದರು ವರ್ಷದ ಕೊನೆಯಲ್ಲಿ ಉತ್ತಮ ಭಜನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ತಿಳಿಸಿದರು. ಹಾಗೆಯೇ ಮುಂದೆ ಒಳ್ಳೆಯ ರೀತಿಯಲ್ಲಿ ಭಜನೆಯು ನಡೆಯುವಂತಾಗಲಿ ಎಂದು ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಇವರು ಭಜನೆಯು ಸರ್ವರನ್ನೂ ಒಗ್ಗೂಡಿಸುತ್ತದೆ. ಅದು ಎಂದೂ ವಿಭಜಿಸುವುದಿಲ್ಲ ಎಂದು ಪ್ರಾಸ್ತವಿಕ ನುಡಿಗಳ ಮೂಲಕ ತಿಳಿಸಿದರು. ನಂತರ ಸರ್ವಧರ್ಮದ ಪ್ರಾರ್ಥನೆಯನ್ನು ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಕುಣಿತ ಭಜನೆಯು ನೆರವೇರಿತು. ತದ ನಂತರ ಶಾಲಾ ಎಲ್ಲಾ ವಿದ್ಯಾರ್ಥಿಗಳು ಸರ್ವಧರ್ಮದ ಭಜನೆಯಲ್ಲಿ ಭಾಗವಹಿಸಿದರು.ಕೊನೆಯದಾಗಿ ಮಂಗಳಾರತಿಯೊಂದಿಗೆ ಈ ಕಾರ್ಯಕ್ರಮವು ಪೂರ್ಣಗೊಂಡಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಶಿಕ್ಷಕಿ ಮಂಜುಳಾ ಜೈನ್ ಇವರು ನಿರೂಪಿಸಿ ಧನ್ಯವಾದಗೈದರು.

