ಸಸಿಹಿತ್ಲು : ಫೆ.4 – 10 ರವರೆಗೆ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ

0
19

ಮುಲ್ಕಿ : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ಧಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜಾಗಿ ನಿಂತಿದೆ. ಫೆ.4 ರಿಂದ ಮೊದಲ್ಗೊಂಡು 10 ರ ತನಕ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ ಬಿ ಕರ್ಕೇರ ಹೇಳಿದರು.

ಅವರು ಕ್ಷೇತ್ರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಸಿಹಿತ್ಲು ಎಂಬ ಪುಟ್ಟ ಗ್ರಾಮದಲ್ಲಿ ನಾಲ್ಕು ಕರೆ ಸಮಾಜ ಒಟ್ಟಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ಸಿದ್ಧಪಡಿಸಬೇಕಿದ್ದರೆ ಉಳ್ಳಾಯ ಮತ್ತು ಪರಿವಾರ ಶಕ್ತಿಗಳ ಕಾರ್ನಿಕ ಹಾಗೂ ದಾನಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದರಿಂದ ದೈವಸ್ಥಾನ ಭವ್ಯ ಶಿಲಾಮಯವಾಗಿದೆ ಶ್ರೀ ಉಳ್ಳಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬೂದಾಬಾರೆ ಮತ್ತು ಮಾಯಂದಾಲ್ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದ್ದು, ದೈವಸ್ಥಾನದ ಪ್ರಧಾನ ಗೋಪುರವನ್ನು ನವೀಕರಿಸಲಾಗಿದೆ.

ದೈವಸ್ಥಾನದ ಒಳಾಂಗಣದಲ್ಲಿ ಫೆ.4 ರಿಂದ 8 ರ ತನಕ ಹಳೆಯಂಗಡಿಯ ವೇದಮೂರ್ತಿ ಎಚ್ ರಂಗನಾಥ ಭಟ್ ನೇತೃತ್ವದಲ್ಲಿ ನಿರಂತರ ವೈದಿಕ ವಿಧಿ ವಿಧಾನಗಳು, ಋತ್ವಿಜರ ನೇತೃತ್ವದಲ್ಲಿ ನಡೆಯಲಿದೆ ಹಾಗೂ ಕ್ಷೇತ್ರದ ಹೊರಾಂಗಣದ ಎರಡು ವೇದಿಕೆಗಳಾದ “ಉಳ್ಳಾಯ ಮದಿಪು ಚಾವಡಿ” ಯಲ್ಲಿ ಧಾರ್ಮಿಕ ಸಭೆ ಹಾಗೂ ಕಾಂತುಲಕಣ ಗಡಿಪ್ರದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ ಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆ.4ರಿಂದ 8ರ ತನಕ ನಿರಂತರ ಭಜನಾ ಕಾರ್ಯಕ್ರಮ “ಕಾಂತಾಬಾರೆ ಬೂದಾಬಾರೆ ಭಜಕ ಎ ಎಂಬ ವೇದಿಕೆಯಲ್ಲಿ ನಡೆಯಲಿದೆ ,ಇತಿಹಾಸ ಪುರುಷರಾದ ಕಾಂತಾಬಾರೆ ಬುದಾಬಾರೆಯರು ಸುಮಾರು 800 ವರ್ಷಗಳ ಹಿಂದೆ ಸ್ಥಾಪಿಸಿದ ಈ ಗರೋಡಿಯನ್ನು ಸದ್ಯೋಭವಿಷ್ಯದಲ್ಲಿ ಅವಿಸ್ಮರಣೀಯವಾಗಿ ಉಳಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಸಾಕಾರಗೊಳ್ಳುವ ಭರವಸೆ ಇದೆ, ದೈವಸ್ಥಾನ ಸಸಿಹಿತ್ಲು ಕಡಲಕಿನಾರೆಗೆ ಹೊಂದಿಕೊಂಡಿರುವುದರಿಂದ ಪ್ರವಾಸಿ ತಾಣವಾಗಿದ್ದು ವಿಶಿಷ್ಟ ಕಲ್ಪನೆಯಲ್ಲಿ ಅಭಿವೃದ್ಧಿಪಡಿಸಿ ಧಾರ್ಮಿಕ ದತ್ತಿ ಇಲಾಖೆ ಮುಖಾಂತರ ಯೋಜನೆಗಳನ್ನು ಹಮ್ಮಿಕೊಳ್ಳುವ ಆಶಯವಿದೆ ಎಂದರು.

ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಅಗಾಧ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಪಾರ್ಕಿಂಗ್ ನ್ನು ವ್ಯವಸ್ಥಿತ ರೀತಿಯಲ್ಲಿ ಯಶಸ್ವಿಗೊಳಿಸಲು ಸಿದ್ಧತೆಗಳನ್ನು ನಡೆಸಲಾಗಿದೆ. ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸಲು ಊರಿನ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ, ಮಹಿಳಾ ಸಮಿತಿ ಮಾತ್ರವಲ್ಲದೆ ಮುಂಬೈ, ಬೆಂಗಳೂರು ಮತ್ತು ಹೊರನಾಡಿನಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದು ಸಿಬಿ ಕರ್ಕೇರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಗೌರವ ಸಲಹೆಗಾರ ಚಂದ್ರಶೇಖರ ನಾನಿಲ್, ಮುಂಬೈ ಸಮಿತಿಯ ಅಧ್ಯಕ್ಷ .ಸತೀಶ್ ಎನ್ ಕೋಟ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್ * ಕಾರ್ಯಾಧ್ಯಕ್ಷರು , ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಆರ್ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ* ಕೋಶಾಧಿಕಾರಿ ಎಸ್.ದಯಾನಂದ್ , ಕಾಂತುಲಕಣ ಗ ಪಠೇಲ್ ಮನೆತನದ ನಿರಂಜನ್ ಬಂಗೇರ ಮತ್ತು ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕ ಸುರೇಶ್ ಪೂಜಾರಿ ಮತ್ತು ದಾಮೋದರ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ, ಗೌರವಾಧ್ಯಕ್ಷೆ ಪುಷ್ಪಾ ದಯಾನಂದ್ಜೀ ರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಸ್. ಆರ್. ಪ್ರಭಾತ್, ಆಡಳಿತ ಸಮಿತಿ ಕಾರ್ಯದರ್ಶಿ ನವೀನ್ ಕುಮಾರ್, ಜೊತೆ ಕಾರ್ಯದರ್ಶಿ ಹರೀಶ್ ಕುಮಾರ್, ಜೊತೆ ಕೋಶಾಧಿಕಾರಿ ಯತೀಶ್ ಸಾಲ್ಯಾನ್, ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here