ಬೆಂಗಳೂರು : ನಗರದ ಗಾಂಧಿ ಭವನದ ಹತ್ತಿರ ಇರುವ ಮಾನ್ಯ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು. ಇವರ ಗೃಹದಲ್ಲಿ ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್’ ವತಿಯಿಂದ ಮಾನ್ಯ ಸಭಾಪತಿಗಳಾದ ಶ್ರೀಯುತ ಬಸವರಾಜ ಹೊರಟ್ಟಿ ರವರಿಗೆ ಟ್ರಸ್ಟ್ ನ ಸಂಸ್ಥಾಪಕಿ ಸಾಹಿತಿ, ಶಿಕ್ಷಕಿ, ಸಾಮಾಜಿಕ ಚಿಂತಕಿ, ಪತ್ರಕರ್ತೆ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ತನ್ನ ಕೃತಿಗಳಾದ ‘ಪ್ರತಿಬೋಧ’ ಹಾಗೂ ‘ಪ್ರತಿಮಾವಲೋಕನ’ ಕೃತಿ ಅವರ ಬಗ್ಗೆ ಬರೆದಂತಹ ಪ್ರತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳ ಕೈಪಿಡಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿದ ಮಾನ್ಯ ಸಭಾಪತಿಗಳು ಒಬ್ಬ ಮಹಿಳೆಯಾಗಿ, ಸಾಹಿತಿಯಾಗಿ, ಸಾಮಾಜಿಕ ಚಿಂತನೆಗಳಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಪ್ರತಿಮಾ ಹಾಸನ್ ರವರ ಕಾರ್ಯವು ಹೀಗೆ ಮುಂದುವರೆಯುತ್ತಾ ಸಾಗಲಿ ಎಂದು ಸಂತಸ ಪಟ್ಟರು . ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಸಾಧನೆ ಮಾಡಿರುವುದು ಸಂತಸದ ವಿಚಾರ ನಾನು ಪ್ರತಿಮಾ ಹಾಸನ್ ರವರನ್ನು ಪ್ರೌಢಶಾಲಾ ಶಿಕ್ಷಕಿ, ಸಾಹಿತಿ ಎಂದು ತಿಳಿದಿದ್ದೆ. ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸುತ್ತಿರುವ ಪ್ರತಿಮಾ ಹಾಸನ್ ರವರ ಕ್ರಿಯಾಶೀಲ ಕಾರ್ಯಗಳನ್ನು ಕಂಡರೆ ಖುಷಿಯಾಗುತ್ತದೆ. ಹೀಗೆ ಇವರ ಕಾರ್ಯಗಳು ಮುಂದುವರೆಯಲಿ ಎಂದು ತಿಳಿಸುತ್ತ ಆಶೀರ್ವಾದಿಸಿದರು.
ಸಭಾಪತಿಗಳ ಮುಂದೆ ಐದಾರು ಆಶು ಕವಿತೆಗಳನ್ನು ಹೇಳುತ್ತಾ ಅವರ ಸಾಧನೆಯ ಬಗ್ಗೆ ತಿಳಿಯುತ್ತ ಅವರನ್ನು ಸಂದರ್ಶಿಸಿ ಸಾತ್ವಿಕ ಹಠ ಛಲ ಸಾಧನೆಗೆ ದಾರಿದೀಪ ಎಂಬುದನ್ನು ಸಭಾಪತಿಗಳನ್ನು ಕಂಡರೆ ತಿಳಿಯುತ್ತದೆ ಎಂದು ತಿಳಿಸುತ್ತ ಅವರು ಯುವ ಪೀಳಿಗೆಗೆ ಮಾರ್ಗದರ್ಶಿಗಳಾಗಿದ್ದಾರೆ ಶಿಕ್ಷಕರಿಗೆ ಶಕ್ತಿ ಯಾಗಿದ್ದಾರೆ ಎಂದು ತಿಳಿಸುತ್ತ ಸಂತಸ ಪಡುತ್ತಾ ಹುಟ್ಟಿದ ಮೇಲೆ ಏನಾದರೂ ಸಾಧಿಸುವುದು, ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತ ಸಾಗುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ.ಆಗಿದ್ದರೆ ಅದು ಒಂದು ಸಾಧನೆಯೇ, ಸಮಾಜದಲ್ಲಿ ಕಾಲೆಳೆಯುವುದನ್ನು ಬಿಟ್ಟು, ಕಾರ್ಯನಿರ್ವಹಿಸುವುದರ ಕಡೆಗೆ ಗಮನವಿದ್ದರೆ ಸನ್ಮಾನಗಳು ಪ್ರಶಸ್ತಿಗಳು ಅವುಗಳಾಗಿಯೇ ಅರಸಿ ಬರುತ್ತದೆ.ಒಟ್ಟಾರೆ ಶ್ರೀಯುತ ಬಸವರಾಜ ಹೊರಟ್ಟಿ ರವರ ಕಾರ್ಯಪ್ರವೃತ್ತಿಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.

