ಸೌರಭ್ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಬಸ್ಸು ತಂಗುದಾಣ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜನತಾಪಾರ್ಟಿ ನಗರಾಧ್ಯಕ್ಷ ನಿರಂಜನ್ ಜೈನ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು ರಿ ಅಧ್ಯಕ್ಷರು ಹಾಗೂ ಸ್ಥಳೀಯ ಉದ್ಯಮಿ ನವೀನ್ ದೇವಾಡಿಗ, ಉದ್ಯಮಿ ಹಾಗೂ ಸಮಾಜಸೇವಕ ಅಮ್ಮನ ನೆರವು ಅವಿನಾಶ್ ಶೆಟ್ಟಿ, ಸ್ಥಳೀಯ ಉದ್ಯಮಿ ಸೀತಾರಾಮ ಶೆಟ್ಟಿ,ಪ್ರೇಮಾನಂದ ಪೈ, ಸುರೇಶ್ ಹೆಗ್ಡೆ ಎಳ್ನಾಡುಗುತ್ತು, ಪಣಿರಾಜ್ ಜೈನ್, ಮಹಿಳಾಮೋರ್ಚ ವಾರ್ಡ್ ಪ್ರಮುಖರಾದ ರೋಹಿಣಿ ಉಪಸ್ಥಿತಿ ಇದ್ದರು. ಕಾಬೆಟ್ಟು ಮನೀಶ್ ಕುಲಾಲ್ ಸ್ವಾಗತಿಸಿದರು. ಹಾಗೂ ರಾಘವೇಂದ್ರ ಶೆಟ್ಟಿಗಾರ್ ಇವರು ದಾನಿಗಳನ್ನು ಸ್ಮರಿಸಿದರು ಮತ್ತು ಧನ್ಯವಾದ ತಿಳಿಸಿದರು.

