ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B.C ಟ್ರಸ್ಟ್ (ರಿ.) ಗುರುವಾಯನಕೆರೆ, ನಾರಾವಿ ವಲಯ ಕೊಕ್ರಾಡಿ/ಸಾವ್ಯ ಕಾರ್ಯಕ್ಷೇತ್ರದ ನಿಸರ್ಗ ಜ್ಞಾನ ವಿಕಾಸ ಕೇಂದ್ರದಲ್ಲಿ ಆಷಾಢ ಮಾಸದ ಪೌಷ್ಟಿಕ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಹಿರಿಯರಾದ ರಾಧಾ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಾರಾವಿ ವಲಯ ಮೇಲ್ವಿಚಾರಕಿ ವಿಶಾಲ ಕೆ. ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಗ್ರಾಮೀಣ ಪ್ರದೇಶದ ಮಹಿಳೆಯರು ನಾಲ್ಕು ಗೋಡೆಗಳ ನಡುವಿನಲ್ಲಿ ಏಕಾಂತದಲ್ಲಿದ್ದು ಕಷ್ಟಕರವಾದ ಕುಟುಂಬದ ಜೀವನ ಮನಗಂಡು ಮಾತೃ ವಿ. ಹೇಮಾವತಿ ಅಮ್ಮನವರು ಹುಟ್ಟುಹಾಕಿದ ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಶಿಸ್ತು , ಸ್ವಚ್ಚತೆ, ಆರೋಗ್ಯ, ಶಿಕ್ಷಣ,ಸ್ವ ಉದ್ಯೋಗ ತರಬೇತಿ, ಕಾನೂನು ಸಲಹೆ ಇತ್ಯಾದಿ ಹತ್ತು ಹಲವಾರು ಸೌಲಭ್ಯ ಮಾಹಿತಿ ಮಾರ್ಗದರ್ಶನ ಪಡೆದುಕೊಂಡು ಆರ್ಥಿಕವಾಗಿ ಪರಿವರ್ತನೆಯ ಹಾದಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣ ಎಂದು ತಿಳಿಸಿದರು. ಮತ್ತು ನಮ್ಮ ಹಿಂದಿನ ಪೂರ್ವಜರು ಆಷಾಢ ಮಾಸ ಕಾಡಿನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಗೆಡ್ಡೆ ಗೆಣಸು, ಸೊಪ್ಪು, ತರಕಾರಿ /ಕಾಳುಗಳಿಂದ ತಯಾರಿಸುವ ವಿವಿಧ ಬಗೆಯ ತಿಂಡಿ ತಿನಿಸುಗಳ ಸವಿದ ಅನುಭವ ಹಂಚಿಕೊಂಡರು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡೋಣ ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಆರೋಗ್ಯ ಇಲಾಖೆ ಸಿಬ್ಬಂದಿ ಪುಷ್ಪ ರವರು ಮಾತನಾಡಿ, ಮಹಿಳೆಯರು ಆರೋಗ್ಯ ನ್ಯೆರ್ಮಲ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗರ್ಭಾವಸ್ಥೆಯಲ್ಲಿ ಉತ್ತಮ ಪೌಷ್ಟಿಕಾಂಶಯುಕ್ತ ಸೊಪ್ಪು, ಮೊಳಕೆ ಕಾಳು, ಹಣ್ಣು, ತರಕಾರಿಗಳು ಆಹಾರ ಸೇವನೆಯಿಂದ ಗರ್ಭಾಶಯದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಜನಿಸಿದ ಶಿಶುವಿಗೆ ಸ್ತನ ಪಾನ ಒಂದು ವರ್ಷ ಕಾಲದವರೆಗೆ ನೀಡಿದರೆ ಆರೋಗ್ಯ ವೃದ್ಧಿಯಾಗುತ್ತದೆ . ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗ ಬಾರದಂತೆ ತಡೆಯಲು ಸ್ವಚ್ಚತೆ ಮತ್ತು ಗುಣಮಟ್ಟದ ಆಹಾರ ಸೇವನೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ಸಮನ್ವಯಾಧಿಕಾರಿ ಪೂರ್ಣಿಮಾ ರವರು ಕೇಂದ್ರದ ಸದಸ್ಯೆಯರು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸು ಉಣಬಡಿಸಿದ ಮತ್ತು ಹೂ ಗುಚ್ಛ ತಯಾರಿಸಿದ ಎಲ್ಲಾ ಸದಸ್ಯೆಯರಿಗೆ ಪ್ರೋತ್ಸಾಹಕ ಕೊಡುಗೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಯೋಜನೆಯನ್ನು ನಿಸರ್ಗ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ನೀಲಮ್ಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಾವ್ಯ ಒಕ್ಕೂಟದ ಅಧ್ಯಕ್ಷೆ ಯಮುನಾ, ಕೊಕ್ರಾಡಿ ಒಕ್ಕೂಟದ ಅಧ್ಯಕ್ಷೆ ವಾರಿಜಾ, ಹರೀಶ ಹೆಗ್ಡೆ ಸದಸ್ಯರು ಅಂಡಿಂಜೆ ಗ್ರಾಮ ಪಂಚಾಯಿತಿ , ಶೇಖರ ಸುವರ್ಣ ಅಧ್ಯಕ್ಷರು ಜನಜಾಗೃತಿ ಗ್ರಾಮ ಸಮಿತಿ ಕೊಕ್ರಾಡಿ/ಸಾವ್ಯ, ಸೇವಾ ಪ್ರತಿನಿಧಿ ಗಳಾದ ಶಶಿಧರ ಕೆ. ಕುಲಾಲ್, ಉಷಾ, ನಂದಿನಿ,
ಆಶಾ ಕಾರ್ಯಕರ್ತೆ ಶಿಲ್ಪಾ , ರಮಣಿ ಹೆಗ್ಡೆ ಉಪಾಧ್ಯಕ್ಷರು SDMC ಸ.ಉ.ಹಿ.ಪ್ರಾ.ಶಾಲೆ ಸಾವ್ಯ ಒಕ್ಕೂಟದ ಪದಾಧಿಕಾರಿಗಳು, ಹಾಗೂ ಸಂಘದ ಸದಸ್ಯ/ಸದಸ್ಯೆಯರು ಮತ್ತು ಕೇಂದ್ರದ ಎಲ್ಲಾ ಸದಸ್ಯೆಯರು ಹಾಗೂ ಸ್ಥಳ ಮನೆ ಮಾಲಕರಾದ ಸುಂದರ ಪೂಜಾರಿ ಮತ್ತು ವಸಂತಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಪವಿತ್ರ.ಕೆ. ನಿರೂಪಿಸಿದರು , ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಗಳನ್ನು ಶಕುಂತಲಾ ಸ್ವಾಗತಿಸಿ , ಸಭೆಯ ಕೊನೆಗೆ ಪ್ರಮೀಳಾ ವಂದನಾರ್ಪಣೆ ಸಲ್ಲಿಸಿದರು .
.