ಮೂಡುಬಿದಿರೆ: ದಿನಾಂಕ 09-07-2025 ರಂದು ಸರ್ಕಾರಿ ಫ್ರೌಢಶಾಲೆ ಅಳಿಯೂರಿನಲ್ಲಿ ಶಾಲಾ ಸಂಸತ್ತಿನ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಕರು ಚಿನ್ಮಯ್ ನಂದ ಮೂರ್ತಿ ವಹಿಸಿದ್ದರು. ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್ ನೆರವೇರಿಸಿದರು.

ಶಾಲಾ ಸಂಸತ್ತಿಗೆ ಸಂಬಂಧಿಸಿದಂತೆ ಚುನಾವಣೆಯ ಪ್ರಾಸ್ತಾವಿಕ ನುಡಿಯನ್ನು ಸಮಾಜದ ಅತಿಥಿ ಶಿಕ್ಷಕರಾದ ಸುಚಿತ್ ಅವರಿಂದ ನೆರವೇರಿಸಲಾಯಿತು. ಶಾಲೆಯ ಎಲ್ಲಾ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಅತಿಥಿ ಶಿಕ್ಷಕಿ ಶ್ರೀದೇವಿ ಮಾಡಿದರು. ಸ್ವಾಗತ ಭಾಷಣವನ್ನು ಹಿಂದಿ ಅತಿಥಿ ಶಿಕ್ಷಕಿ ಅಲ್ಫಿಯಾ ನೀಡಿದರು. ವಂದನಾರ್ಪಣೆಯನ್ನೂ ಆಂಗ್ಲ ಭಾಷಾ ಅತಿಥಿ ಶಿಕ್ಷಕಿ ಮಣಿತ ನಿರ್ವಹಿಸಿದರು.
ಈ ವರ್ಷ ಶಾಲಾ ಸಂಸತ್ತಿಗೆ ನಾಯಕನಾಗಿ ಸಯ್ಯದ್ ಮಾಜ್ ಆಯ್ಕೆಯಾಗಿದ್ದು, ಉಪನಾಯಕಿಯಾಗಿ ವಂಶಿತ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವು ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು.