ಮೂಡುಬಿದಿರೆ: ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಹಾಗೂ ಕೋಡ್ ಕ್ರಾಫ್ಟ್ ಟೆಕ್ನಾಲಜಿ ಸಹಯೋಗದೊಂದಿಗೆ “ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ” ಉದ್ಘಾಟನೆಗೊಂಡಿತು.
” Code craft Science Working Model, Making and Exhibition Competition” ಕಾರ್ಯಕ್ರಮದಲ್ಲಿ ಶಾಲೆಯ 35 ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ. ಈ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಅಡ್ವೋಕೇಟ್ ಕೆ .ಆರ್ ಪಂಡಿತ್ ರವರು ವಹಿಸಿಕೊಂಡಿದ್ದರು. ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ , ಮಂಗಳೂರು ಇದರ Co-Founder ಮತ್ತು CTO ಆಗಿರುವಂತಹ ಶ್ರೀ ಪ್ರವೀಣ್ ಕ್ಯಾಸ್ಟಲಿನ್ ರವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಸ್ಥಾಪಕರು ಹಾಗೂ ಟ್ರಸ್ಟಿಯಾಗಿರುವ ಪ್ರೊಫೆಸರ್ ಶ್ರೀಶಾ ಭಟ್, ಕೋಡ್ ಕ್ರಾಫ್ಟ್ ಟೆಕ್ನಾಲಜಿಸ್ ಮಂಗಳೂರು ಇದರ Operation lead ಆಗಿರುವ ಶ್ರೀ ಜೋಬಿನ್ ಜೋಸೆಫ್ ಪಿ. ಜೆ, ನಮ್ಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿರುವ ಶ್ರೀ ಶಂಕರ್ ನಾರಾಯಣ್ ರಾವ್, ಶಾಲಾ ಮುಖ್ಯ ಶಿಕ್ಷಕರಾಗಿರುವ ಶ್ರೀ ದಿನಕರ ಕುಂಭಾಶಿ ಹಾಗೂ ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಸಂಪತ್ ರಾಜ್ ರವರು ಉಪಸ್ಥಿತರಿದ್ದರು. ಈ ವಿಜ್ಞಾನ ಮೇಳ ವನ್ನು ವಿಶೇಷವಾಗಿ ವಿಭಿನ್ನ ರೀತಿಯಲ್ಲಿ ವೈಜ್ಞಾನಿಕ ರಾಸಾಯನಿಕ ಕ್ರಿಯೆಗಳನ್ನು ನಡೆಸುವುದರ ಮೂಲಕ ಉದ್ಘಾಟಿಸಿಲಾಯಿತು. ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮುಖ್ಯ ಶಿಕ್ಷಕರಾದ ದಿನಕರ ಕುಂಭಾಶಿ, ಸ್ವಾಗತವನ್ನು ಸಂಪತ್ ರಾಜ್ ರವರು, ಧನ್ಯವಾದವನ್ನು ಶ್ರೀ ಸದಾಶಿವ ಉಪಾಧ್ಯಾಯ ಹಾಗೂ ನಿರೂಪಣೆಯನ್ನು ಸುಧಾಕರ ಪೋಸ್ರಾಲ್ ರವರು ನೆರವೇರಿಸಿದರು.
ಈ ಕಾರ್ಯಕ್ರಮದ ತೀರ್ಪುಗಾರರಾಗಿ ಉಪನ್ಯಾಸಕರಾದ ಕುಮಾರಿ ವೀಕ್ಷಾ ಮತ್ತು ಶ್ರೀ ಪೂರ್ಣ ರವರು ಕಾರ್ಯನಿರ್ವಹಿಸಿರುತ್ತಾರೆ. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ವಯಂಸೇವಕರಾದ ಹೇಮಂತ್, ಪ್ರಜ್ವಲ್, ಜಿತೇಶ್ ಹಾಗೂ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಈ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ವನ್ನು ಭವಿಷ್ ಮತ್ತು ಮಣಿ ಪ್ರಸಾದ್, ದ್ವಿತೀಯ ಸ್ಥಾನವನ್ನು ಸಮೀಕ್ಷಾ ಮತ್ತು ಶರಣ್ಯ, ತೃತೀಯ ಬಹುಮಾನವನ್ನು ದರ್ಶಿತ್ ಮತ್ತು ಪ್ರಯಾಗ್ ಹಾಗೂ ಸಮಾಧಾನಕರ ಬಹುಮಾನವನ್ನು ಓಂಕಾರ್ ಮತ್ತು ಅರ್ಪಿತ್ ಇವರ ಜೊತೆಗೆ ಮಣಿಕಂಠಯ್ಯ ಮತ್ತು ಮಂಜುನಾಥ ದಡ್ಡಿ ರವರು ಪಡೆದುಕೊಂಡಿರುತ್ತಾರೆ. ಬಹುಮಾನವನ್ನು ಪಡೆದ 5 ತಂಡಗಳು ಜಿಲ್ಲಾಮಟ್ಟದ ವಿಜ್ಞಾನ ಮೇಳ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.ಇವರಿಗೆ ಶಾಲಾ ಸಂಚಾಲಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.