ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆಯಲ್ಲಿ ಅ.24ರಂದು ಶುಕ್ರವಾರದಂದು ಲಯನ್ಸ್ ಶಾಲಾ ಸಭಾಂಗಣದಲ್ಲಿ ವಿಜ್ಞಾನ ಮಾದರಿಗಳ ಸ್ಷರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .

ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷರಾದ ಲ.ಸತೀಶ್ ಪ್ರಭು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೂಡಬಿದ್ರೆ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮೋಹನ್ ಕುಮಾರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಸುತ್ತ ದಿನಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ, ಒಲವು ಹೊಂದಿರಬೇಕು.ಇಂತಹ ಸ್ಷರ್ಧೆಯು ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಪೂರಕವಾಗಲಿದೆ ಎಂದು ತಿಳಿಸಿದರು.
ಸಂಸ್ಥೆಯ ಗೌರವಾನ್ವಿತ ಸಂಚಾಲಕರಾದ ಲ.ಕೆ ಸತ್ಯಶಂಕರ್ ಶೆಟ್ಟಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮು.ಕ.ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ.ಯಶವಂತ್ ಆಚಾರ್ಯ, ತೀರ್ಪುಗಾರರಾದ ಸುಬ್ರಹ್ಮಣ್ಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಸಂಪತ್ ರಾಜ್, ಮಹಾವೀರ ಕಾಲೇಜಿನ ಉಪನ್ಯಾಸಕಿ ಚೈತ್ರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರದ್ಯುಮ್ನ ಮೂರ್ತಿ, ಮನೋಜ್ , ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್ ಕೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ತರುವಾಯ ಮುಖ್ಯ ಅತಿಥಿ ಮೋಹನ್ ಕುಮಾರ್ ಸರ್ ರವರು Mindscape Science Gallery ಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗಿಗಳಾಗಿದ್ದರು.
ಪ್ರತಿಮಾ ಸ್ವಾಗತಿಸಿ, ಮಂಜುವಾಣಿ ನಿರೂಪಿಸಿ, ವಂದಿತಾ ಪೈ ವಂದನಾರ್ಪಣೆ ಗೈದರು.

