ವರದಿ :ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ.
ತುಳುನಾಡು : ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆಗಾಗಿ ಕನ್ನಡ ಫಿಲಂ ಚೇಂಬರ್(ರಿ.)ನೀಡುವ 2025 ನೇ ಸಾಲಿನ “ಶಿಕ್ಷಣ ಸೇವಾರತ್ನ” ಪ್ರಶಸ್ತಿಯನ್ನು ಪಡ್ರೆಯ ಪೆರಿಕ್ಕಾನದ ಪ್ರವೀಣ್ ಭಟ್ ರವರು ಬೆಂಗಳೂರಿನಲ್ಲಿ ಸ್ವೀಕರಿಸಿದರು.
ಕಲಾ ವಾಣಿಜ್ಯ ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣ ಪಡೆದಿರುವ ಬಹುಮುಖ ಪ್ರತಿಭೆಯಾಗಿರುವ ಇವರು ಶೈಕ್ಷಣಿಕ , ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳಲ್ಲಿ ಗುರುತಿಸಿಕೊಂಡಿರುವ ಇವರು 26 ವರ್ಷಗಳ ಸುಧೀರ್ಘ ಅವಧಿಯಲ್ಲಿ ಸರಿಸುಮಾರು 1600ಕ್ಕೂ ಹೆಚ್ಚು ಜಿಲ್ಲಾ,ರಾಜ್ಯ ,ರಾಷ್ಟ್ರ ಮಟ್ಟದ ವೈಜ್ಞಾನಿಕ ಮಾದರಿಗಳಿಗೆ ಮಾರ್ಗದರ್ಶನ ನೀಡಿದ್ದರು.ಕಲಾ,ವಾಣಿಜ್ಯ, ವಿಜ್ಞಾನ,ಶಿಕ್ಷಣದಲ್ಲಿ ಪದವಿ , ವಿವಿಧ ಭಾಷಾ ವಿಷಯಗಳಲ್ಲಿ ಕಲಾ,ವಾಣಿಜ್ಯ ವಿವಿಧ ವಿಷಯಗಳನ್ನು ಮತ್ತು “ತುಳು ಭಾಷೆಯಲ್ಲಿ” ಮಂಗಳೂರು ವಿ.ವಿ. ಯಿಂದ ಸ್ನಾತಕೋತ್ತರ ಪದವಿ ಯನ್ನು ಒಳಗೊಂಡು 9 ಕ್ಕೂ ಹೆಚ್ಚು ಪದವಿಗಳನ್ನು ಪಡೆದಿರುತ್ತಾರೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಡಿಸೆಂಬರ್ 24 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳ, ಚಲನಚಿತ್ರ ಕಲಾವಿದರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.ಇವರು ಸ್ವರ್ಗ ಪೆರಿಕ್ಕಾನ ರಾಮ ಭಟ್ ರಾಧಾ ದಂಪತಿಗಳ ಪುತ್ರ.

