ಎಸ್ ಡಿ ಎಂ ಶಾಲೆಯ ವಿದ್ಯಾರ್ಥಿ ಪ್ರತಿಷ್ಠ ಶೆಟ್ಟಿಗೆ ಜ್ಞಾನ ಯೋಗಿ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ ಪ್ರಧಾನ

0
7

ಮಂಗಳೂರು : ಎಸ್ ಡಿ ಎಂ ಶಾಲೆಯ ವಿದ್ಯಾರ್ಥಿ ಪ್ರತಿಷ್ಠ ಶೆಟ್ಟಿ ಜ್ಞಾನ ಯೋಗಿ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ ದೊರಕಿದದೆ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವ ಕನ್ನಡ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನ-2026ರ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ ಪ್ರಧಾನವನ್ನು ಮಾರ್ಚ್ 8ರಂದು ಇಂಡೋ ಗ್ಲೋಬ್ ಪದವಿ ಪೂರ್ವ ಕಾಲೇಜು ಹೇಸರಘಟ್ಟ ಬೆಂಗಳೂರು ಇಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ ಅಕ್ಕರ, ಸಮ್ಮೇಳನದ ಅಧ್ಯಕ್ಷರಾದ ಮಾಲತಿ ಮೇಲುಕೋಟೆ, ಕವಿ ಜಯಪ್ಪ ಹೊನ್ನಾಳಿ, ಸಿನಿಮಾ ಮತ್ತು ಕಿರುತೆರೆಯ ನಟರಾದ ಅಂಜನಾ ಗಿರೀಶ್, ರಾಜ್ ಕಿರಣ್, ವಿನಾಯಕ, ಶೈಲಜಾ ಬಾಬು ಜಯದೇವ್ ಮುಂತಾದವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.ಇದಕ್ಕೆ ಮಂಗಳೂರಿನ ಹೆಸರಾಂತ ಎಸ್ .ಡಿ .ಎಂ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾದ ಕುಮಾರಿ ಪ್ರತಿಷ್ಠ ಶೆಟ್ಟಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಮಂಗಳೂರಿನ ಸುಚಿತ್ರ ಶೆಟ್ಟಿ ಮತ್ತು ಪುರಂದರ ಶೆಟ್ಟಿ ಅವರ ಪುತ್ರಿಯಾಗಿದ್ದಾಳೆ .

LEAVE A REPLY

Please enter your comment!
Please enter your name here