ಉಡುಪಿ: ಎಳ್ಳಮಾವಾಸ್ಯೆ ಅಂಗವಾಗಿ ಮಲ್ಪೆ ಕಡಲತೀರದಲ್ಲಿ ಮುಂಜಾನೆ ಸಾವಿರಾರು ಮಂದಿ ಭಾರೀ ಚಳಿಯನ್ನು ಲೆಕ್ಕಿಸದೆ ಸಮುದ್ರಗೈದರು. ಮುಂಜಾನೆ 3 ಗಂಟೆಯಿಂದಲೇ ಸಮುದ್ರಸ್ನಾನಕ್ಕೆ ಕಡಲತೀರ ಬಳಿ ಜನ ಸೇರಿದ್ದರು. ಉಡುಪಿ ಜಿಲ್ಲೆಯ ಅನೇಕ ಕಡೆಗಳಿಂದ ಜನರು ಮಲ್ಪೆಗೆ ಆಗಮಿಸಿದ್ದರು . ನೂರಾರು ವೈದಿಕರು ಪಿಂಡಪ್ರದಾನದ ಸಂಪ್ರದಾಯಗಳನ್ನು ನಡೆಸಿಕೊಟ್ಟರು . ಪಿಂಡಪ್ರದಾನ ಮಾಡಿದ ಬಳಿಕ ಸಮುದ್ರದಲ್ಲಿ ಅ್ಯರ್ ಪ್ರದಾನ ಮಾಡಿದರು. ಬಳಿಕ ಕಡಲ ತೀರದ ಬಳಿಯ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಲ್ಪೆ ಕಡಲ ತೀರ ಮಾತ್ರವಲ್ಲದೆ ಕಾಪು, ಮಟ್ಟು, ಸಹಿತ ವಿವಿಧೆಡೆ ಕಡಲ ತೀರ ಪ್ರದೇಶಗಳಲ್ಲಿ ಸಾವಿರಾರು ಮಂದಿ ಸಮುದ್ರ ಸ್ನಾನ ಮಾಡಿದ್ದಾರೆ.


