ಸೆ. 3ರಂದು ಗುಂಡ್ಯಡ್ಕ ದೇವಸ್ಥಾನದಲ್ಲಿ ಭಜನಾಮೃತ ಆಯೋಜನೆ

0
96

ವರದಿ :-ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ದಕ್ಷಿಣ ಕನ್ನಡ :- ಮೂಡುಬಿದಿರೆ ಸಮೀಪದ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಡ್ಕ ಇಲ್ಲಿ 03.09.2025 ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ ಗಂಟೆ 12ವರೆಗೆ “ಭಜನಾಮೃತ” ವಿಶೇಷ ಭಜನಾ ಸಂಕೀರ್ತನಾ ಸೇವೆ ನಡೆಯಲಿದ್ದು ಈ ಶುಭ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಮಂತ್ರಣ ಪತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 3ರ ಬೆಳಿಗ್ಗೆ 8:00 ಗಂಟೆ ಬಳಿಕ ದೇವತಾ ಪ್ರಾರ್ಥನೆ, ಪವಮಾನ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಭಜನಾ ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಮಹಾದೇವ ಪರಾಡ್ಕರ್, ಶಂಕರಿ ಎಂ ಪರಾಡ್ಕರ್ ಕೇಮಾರು, ಎಸ್ ವಾಸುದೇವ ಭಟ್, ಕೆ ವಿ ಪ್ರಭಾವತಿ ಕಾಸರಗೋಡು, ಬಿ ಎಸ್ ಉದಯಕುಮಾರ್, ಪುಷ್ಪಲತಾ ಕೊಪ್ಪ ಹಾಗೂ ಪಾಂಡುರಂಗ ವಿ ಸಪ್ರೆ ಉಪಸ್ಥಿತರಿರುತ್ತಾರೆ ಎಂದು ಆಮಂತ್ರಣ ಪತ್ರದಲ್ಲಿ ತಿಳಿಸಿದ್ದಾರೆ.
ತಾಂಗೋಡೆ ಲಕ್ಷ್ಮೀಕಾಂತ ಕುಟುಂಬ, ಸಹೋದರರು ಈ ಭಜನಾ ಕಾರ್ಯಕ್ರಮದ ಸೇವಾಕರ್ತರಾಗಿದ್ದು ಸ್ಥಳೀಯ ಹಾಗೂ ಆಹ್ವಾನಿತ ಭಜನಾ ಮಂಡಳಿಗಳು ಭಾಗವಹಿಸುತ್ತಿದ್ದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಶ್ರೀಯುತ ಲಕ್ಷ್ಮಿಕಾಂತ ಕುಟುಂಬ ಎಲ್ಲರಿಗೂ ಆದರಣೀಯ ಸ್ವಾಗತ ಕೋರಿದ್ದಾರೆ.

LEAVE A REPLY

Please enter your comment!
Please enter your name here