ಮೂಡುಬಿದಿರೆಯಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ

0
181

ವರದಿ ರಾಯಿ ರಾಜ ಕುಮಾರ

ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿ. ಸಿ ಟ್ರಸ್ಟ್ (ರಿ.), ಮೂಡುಬಿದಿರೆ ಸ್ವ ಉದ್ಯೋಗ ಮಾಡುವ ಸದಸ್ಯರಿಗೆ ಮಾಹಿತಿ ಹಾಗೂ ಸಿಡ್ಡಿ ಸಾಲದ ಬಗ್ಗೆ ಮಾಹಿತಿ ಕಾರ್ಯಕ್ರಮ ಯೋಜನಾ ಕಚೇರಿಯಲ್ಲಿ ನೀಡಲಾಯಿತು. ಧನಂಜಯ್ ಬಿ ರವರು ಪ್ರಾಸ್ತಾವಿಕ ಮಾತಿನಲ್ಲಿ ಸ್ವ ಉದ್ಯೋಗ ದ ಮಹತ್ವ, ಯೋಜನೆಯ ಸದಸ್ಯರಿಗೆ ಸಿಡ್ಡಿ ಸಾಲದ ಅನುಕೂಲತೆ ಬಗ್ಗೆ ತಿಳಿಸಿದರು. ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸ್ವಸ್ತಿಕ್ ಅಕ್ಕಿ ರೊಟ್ಟಿ ಘಟಕದ ಮಾಲಕ ಯೋಜನೆಯ ಫಲಾನುಭವಿ ಗೋಪಾಲ ಪೂಜಾರಿ ಕೆಲ್ಲಪುತ್ತಿಗೆಯವರು ಯೋಜನೆಯ ಸಹಕಾರದಿಂದ ಬೆಳೆದು ಬಂದ ಹಾದಿ, ಯೋಜನೆಯಿಂದ ಪಡೆದ ಸೌಲಭ್ಯ ಗಳು, ಸ್ವ ಉದ್ಯೋಗದ ಸವಾಲುಗಳ ಬಗ್ಗೆ ತಿಳಿಸಿದರು. ಸಿಡ್ಡಿ ಸಾಲ ಪಡೆಯುವ ಬಗ್ಗೆ ಪ್ರಾದೇಶಿಕ ಕಚೇರಿಯ ಸಿಡ್ನಿ ಯೋಜನಾಧಿಕಾರಿಯವರಾದ ಪ್ರವೀಣ್ ರವರು ಸಿಬಿಲ್ ಸ್ಕೋ‌ರ್ ಮಹತ್ವ, ಸಿಡ್ನಿ ಸಾಲ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲಾತಿ, ಸಿಡ್ಡಿ ಸಾಲದ ಉದ್ದೇಶ ಮತ್ತು ಮಹತ್ವಗಳ ಬಗ್ಗೆ ಮಾಹಿತಿ ನೀಡಿ, ಮಹತ್ವ ತಿಳಿಸಿದರು. ತಾಲೂಕಿನ ಎಲ್ಲಾ ವಲಯದ ಸದಸ್ಯರು ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರಕರಾದ ಲೋಕೇಶ್ ಪಿ. ಎಂ ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here