ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಚಿತ್ರದುರ್ಗದ ಒನಕೆ ಓಬವ್ವ ಸ್ಟೇಡಿಯಂ ನಲ್ಲಿ ಇತ್ತೀಚೆಗೆ 70+ ಪ್ರಾಯದ ಅತಿ ಹಿರಿಯರ ಕ್ರೀಡಾ ಕೂಟ ಜರುಗಿತು. ಆ ಕ್ರೀಡಾ ಕೂಟದಲ್ಲಿ ಸುಮಾರು ಹತ್ತು ಮಂದಿ ಅತಿ ಹಿರಿಯ ಕ್ರೀಡಾಪಟುಗಳು 1,500 ಮೀಟರ್ ಓಟದಲ್ಲಿ ಭಾಗವಹಿಸಿದ್ದರು. ರಾಜ್ಯಾದ್ಯಂತದ ಹತ್ತು ಮಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರ್ಮಾಳು ಕುಮಾರಸ್ವಾಮಿ ಅವರು ಕೂಡಾ ಒಬ್ಬರು. ಸಂಖ್ಯೆ 7004 ರ ಟೀಶರ್ಟ್ ಧರಿಸಿದವರು. ಹತ್ತೂ ಮಂದಿಯ ತುಂಬು ಉತ್ಸಾಹಕ್ಕೆ ಅಭಿನಂದನೆಗಳು.