ಮಹಿಳಾ ಹಕ್ಕುಗಳ ರಕ್ಷಣೆಗೆ ಬಲ ತುಂಬುವ ಕಾರ್ಯಕ್ರಮ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಅವರಿಂದ ಉದ್ಘಾಟನೆ

0
134

ವರದಿ : ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

ತುಳುನಾಡು ÷ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ,
ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಬಲೀಕರಣ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯಿದೆ ಕುರಿತು ಮಾಹಿತಿ ತರಬೇತಿ,
ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಜಿಲ್ಲಾ ಬಾಲಭವನ, ಕದ್ರಿ ಪಾರ್ಕ್, ಮಂಗಳೂರು ಇಲ್ಲಿ ದಿನಾಂಕ 24. 11.2025ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಜೈಬುನ್ನೀಸಾ
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ ಇವರು ನೆರವೇರಿಸಿ ಮಾತನಾಡುತ್ತಾ
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರು ಬಳಲುವಂತೆ ಇರಬಾರದು, ದೌರ್ಜನ್ಯ ಒಳಗಾದ ಮಹಿಳೆಯರಿಗಾಗಿಯೇ ರಕ್ಷಣಾ ಕಾಯಿದೆ ಇದೆ ನೊಂದ ಮಹಿಳೆಯರು ತಮ್ಮ ಹತ್ತಿರದ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಪ್ರಕರಣವನ್ನ ತಂದಲ್ಲಿ, ಸಂಪೂರ್ಣ ಉಚಿತವಾಗಿ ಯಾವುದೇ ಶುಲ್ಕಗಳಿಲ್ಲದೆ ಕಾನೂನಾತ್ಮಕ ಸಲಹೆ ಸಹಕಾರಗಳನ್ನು ನೀಡಲಾಗುವುದು ಎಂದರು.

ಗೌರವ ಉಪಸ್ಥಿತರಿದ್ದ ಶ್ರೀಮತಿ ಶೈಲಾ.ಕೆ.ಕಾರಿಗಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಜಿಲ್ಲೆ ಮಂಗಳೂರು
ಇವರು ಮಾತನಾಡಿ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಜೀವಿಸುವ ಹಕ್ಕಿದೆ ಕೌಟುಂಬಿಕ ಸಮಸ್ಯೆಯಿಂದ ಮಹಿಳೆಯರು ಅಥವಾ ಮಕ್ಕಳು ಬಳಲುತ್ತಿದ್ದಲ್ಲಿ ದಯವಿಟ್ಟು ನಮ್ಮ ಇಲಾಖೆಯನ್ನು ಸಂಪರ್ಕಿಸಿ, ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯು ಶ್ರಮಿಸುತ್ತಿದೆ ಮುಂದೆಯೂ ಸಮಾಜದ ಜೊತೆಗಿದೆ ಎಂದರು

ಶ್ರೀಮತಿ ಅರುಣಾ ಯಡಿಯಾಳ್
ಮನಶಾಸ್ತ್ರಜ್ಞರು, ವಿಭಾಗೀಯ ಮುಖ್ಯಸ್ಥರು, ಮನಶಾಸ್ತ್ರ ವಿಭಾಗ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು, ಇವರು ಉಪಸ್ಥಿತರಿದ್ದು ಜೀವನದ ಜೊತೆ ಮನಸ್ಸನ್ನು ಹತೋಟಿಯಲ್ಲಿಡುವ ವಿವರಗಳನ್ನು ನೀಡಿದರು, ಯಾವುದೇ ರೀತಿಯ ಮನೋರೋಗವಿದ್ದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಅಗತ್ಯ ಎಂದರು. ಶುಕರಾಜ್ ಎಸ್ ಕೊಟ್ಟಾರಿ ವಕೀಲರು ಮಂಗಳೂರು ಇವರು ಸಾಮರ್ಥ್ಯಭಿವೃದ್ಧಿ ತರಬೇತಿ ಮತ್ತು ಸಮಾಲೋಚನೆ ಹಾಗೂ ಕಾನೂನಿನ ಅರಿವು ಮಾಹಿತಿ ನೀಡಿದರು. ಸಖಿ ಒನ್ ಸ್ಟಾಪ್ ಸೆಂಟರ್ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಪ್ರಿಯಾ ರಾಜಮೋಹನ್ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಬಂಧ ಪಟ್ಟ ಎಲ್ಲ ಸಂಸ್ಥೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು, ಪತ್ರಕರ್ತರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here