ತುಳುನಾಡು: ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೋಳುವಾರು, ಪುತ್ತೂರು ಇವರ ವತಿಯಿಂದ ಪರಮಪೂಜ್ಯ ಭಾರತಭೂಷಣ ಜಗದ್ಗುರು ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ “ಐರಾವತ” ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಸೆ 21ರಂದು ಆಯೋಜಿಸಲಾಗಿದೆ.
ಕಾರ್ಯಕ್ರಮವು ಸಂಜೆ 6 ಗಂಟೆಗೆ ಭಟ್ಟಾರಕ ಸಭಾಭವನ, ಜೈನ ಮಠ ಮೂಡುಬಿದರೆ ಇಲ್ಲಿ ನಡೆಯಲಿದ್ದು, ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ನಡೆಸಲಾಗುತ್ತಿದೆ. ಗ್ರಾಮಸ್ಥರು, ಯಕ್ಷಗಾನಾಭಿಮಾನಿಗಳು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘದವರು ಆಮಂತ್ರಣ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಭಾಗವತರಾಗಿ ಗಿರೀಶ್ ಮುಳಿಯಾಲ , ಜಯರಾಮ ಭಟ್ ಮುರಳೀಧರ ಕಲ್ಲೂರಾಯ ಕ್ರಮವಾಗಿ ಚಂಡೆ ಮತ್ತು ಮದ್ದಳೆ ನುಡಿಸಲಿದ್ದಾರೆ ಅರ್ಥಧಾರಿಗಳಾಗಿ ಶುಭಾ ಅಡಿಗ, ಕಿಶೋರಿ ನಡುಗಲ್ಲು, ಹರಿಣಾಕ್ಷಿ ಶೆಟ್ಟಿ, ಶಾರದಾ ಅರಸ್, ಮನೋರಮ ಭಟ್ ಭಾಗವಹಿಸಲಿದ್ದಾರೆ ಎಂದು ಆಮಂತ್ರಣದಲ್ಲಿ ತಿಳಿಸಿದ್ದಾರೆ. ಯಕ್ಷಗಾನ ಪ್ರೇಮಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಲಾಮಹೋತ್ಸವವನ್ನು ಯಶಸ್ವಿಗೊಳಿಸಲು ಸಂಘದವರು ಕೋರಿದ್ದಾರೆ.
ವರದಿ ÷ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

