ಕುಂತಳನಗರದಲ್ಲಿ ಸೇವಾ ಸಪ್ತಾಮಿ: ದಾನಿಗಳ ಸ್ಮರಣಾರ್ಥ ‘ಜಾನಕೀರಾಮ’ ಮನೆ ಹಸ್ತಾಂತರ

0
34

ಯಕ್ಷಗಾನ ಕಲಾರಂಗ ವಿದ್ಯಾಪೌಷಕ್ ಪ್ರಥಮ ಪಿಯುಸಿ ವಿದ್ಯಾರ್ಥಿ ದಿಶಾನ್ ಇವನಿಗೆ ಕಾಪು ತಾಲೂಕಿನ ಕುಂತಳ ನಗರದಲ್ಲಿ ಉಡುಪಿಯ ಡಾ. ರಾಜೇಶ್ವರೀ ಜಿ. ಭಟ್ ಅವರು ತಮ್ಮ ತೀರ್ಥರೂಪರಾದ ಕೆ. ರಾಮಕೃಷ್ಣ ರಾವ್ ಅವರ ಸ್ಮರಣೆಯಲ್ಲಿ, 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಜಾನಕೀರಾಮ’ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ದಿನಾಂಕ 02.12.2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಾನಕಿ ಕೆ. ಆರ್. ರಾವ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಡಾ. ರಾಜೇಶ್ವರೀ ಜಿ. ಭಟ್ ಅವರು ನಮ್ಮ ಬದುಕು ರೂಪುಗೊಳ್ಳುವಲ್ಲಿ ತಂದೆಯ ವ್ಯಕ್ತಿತ್ವ ತಾಯಿಯ ಪರಿಶ್ರಮ ಮತ್ತು ಮಾರ್ಗದರ್ಶನ ಮಹತ್ತ್ವದ ಪಾತ್ರ ವಹಿಸಿದೆ ಎಂದರು. ಡಾ. ಗುರುಮೂರ್ತಿಯವರು ಕಲಾರಂಗದ ನಾಯಕತ್ವ, ಪಾರದರ್ಶಕ ವ್ಯವಹಾರ, ಕಾರ್ಯಕರ್ತರ ಅರ್ಪಣಾ ಮನೋಭಾವ ನಮ್ಮ ಮೇಲೆ ಪ್ರಭಾವ ಬೀರಿದೆ. ನಿರಂತರ ಈ ಸಂಸ್ಥೆಯೊಂದಿಗೆ ನಾವಿದ್ದೇವೆ ಎಂದರು. ಯು. ಎಸ್. ರಾಜಗೋಪಾಲ ಆಚಾರ್ಯರು ಡಾ ರಾಜೇಶ್ವರಿಯವರ ತಂದೆ ತಾಯಿರ ಉದಾರ ವ್ಯಕ್ತಿತವವನ್ನು ಪರಿಚಯಿಸಿದರು.ಡಾ.ಕೆ.ಆರ್.ಗುರುಪ್ರಸಾದ್ ಮಾತನಾಡಿ ಸಮಾಜಮುಖಿಯಾಗಿ ಕೆಲಸ ಮಾಡುವ ಕಲಾರಂಗದ ಪರಿಚಯವಾದುದು ಅತ್ಯಂತ ಸಂತಸ ತಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಕಲಾರಂಗದಂತಹ ಸಂಸ್ಥೆ ಎಲ್ಲಾ ಊರಗಳಲ್ಲಿದ್ದರೆ ರಾಮರಾಜ್ಯದ ಕನಸು ನನಸಾಗುವದು ಸುಲಭ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಶಕುಂತಲಾ ಭಟ್, ಕಾರ್ತಿಕ್ ಭಟ್,ಸಂಸ್ಥೆಯ ಉಪಾಧ್ಯಕ್ಷರಾದ, ಎಸ್ ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆ ಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರಾದ ಭುವನ ಪ್ರಸಾದ ಹೆಗ್ಡೆ, ಎ. ಅನಂತರಾಜ ಉಪಾಧ್ಯ,ಮಂಜುನಾಥ ಹೆಬ್ಬಾರ್,ಕಿಶೋರ್ ಸಿ.ಉದ್ಯಾವರ, ಡಾ. ರಾಜೇಶ ನಾವಡ, ಎ. ಅಜಿತ್ ಕುಮಾರ್, ಪ್ರಭಾಕರ ಬಂಡಿ,ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಗಂಗಾದ ಉಪನ್ಯಾಸಕಿ ದಿವ್ಯಾ ಭಟ್ ಪ್ರಾರ್ಥನೆಗೈದರು.

LEAVE A REPLY

Please enter your comment!
Please enter your name here